ದಾವಣಗೆರೆ: ಈಶ್ವರಪ್ಪನವರು ಹಿರಿಯ ಮುಖಂಡರು. ಅವರು ಯಾವುದೇ ಅಪರಾಧ ಮಾಡಿಲ್ಲ. ಹೀಗಾಗಿ ಅವರನ್ನು ಬಂಧಿಸಿ ಎಂದು ಹೇಳುವವರಿಗೆ ನಾಚಿಕೆಯಾಗ್ಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಮುಕ್ತವಾಗಿ ತನಿಖೆ ನಡೆಸಲಿದ್ದು, ಈಶ್ವರಪ್ಪನವರು ಆರೋಪದಿಂದ ಮುಕ್ತರಾಗುತ್ತಾರೆ ಎಂದರು. ಇದನ್ನೂ ಓದಿ: ವಿವೇಕಾನಂದರ ಕನಸಿನ ಭಾರತ ನನಸಾಗುತ್ತಿದೆ: ಮೋಹನ್ ಭಾಗವತ್
Advertisement
Advertisement
ಗುತ್ತಿಗೆದಾರರ ಸಂಘದಿಂದ ಪ್ರಧಾನಮಂತ್ರಿ, ಪಕ್ಷದ ವರಿಷ್ಠರಿಗೆ ಪತ್ರ ಬರೆಯಲಿದೆ. ಈ ಪತ್ರದ ಡ್ರಾಪ್ಟ್ ರೆಡಿಯಾಗಿದ್ದು ಕಾಂಗ್ರೆಸ್ ಮುಖಂಡರ ಮನೆಯಲ್ಲಿ. ಕಾಂಗ್ರೆಸ್ ನವರಿಗೆ ಯಾವುದೇ ವಿಷಯ ಸಿಗದೇ ಈಗ ಈಶ್ವರಪ್ಪನವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಜನರು ಕಾಂಗ್ರೆಸ್ ನವರನ್ನು ಮೂಲೆ ಗುಂಪು ಮಾಡಿದ್ದು, ಮುಂದೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಾರೆ ಎಂದು ಕಿಡಿಕಾರಿದರು.
Advertisement
Advertisement
ಯಡಿಯೂರಪ್ಪ, ಈಶ್ವರಪ್ಪ, ಶಂಕರ್ ಮೂರ್ತಿ ಪ್ರಶ್ನಾತೀತ ನಾಯಕರು. ಯಾವುದೇ ಕಾರಣಕ್ಕೂ ಅವರನ್ನು ಸೈಡ್ ಲೈನ್ ಪ್ರಶ್ನೆಯೇ ಇಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಿಜೆಪಿ ಯುವನಾಯಕನಿಂದ ನೀಚ ಕೃತ್ಯ – ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿಕಾರಿದ್ದೇಕೆ?