ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಗಮನ ಸೆಳೆದರು.
ರಾಜೇಂದ್ರ ಹೆಗ್ಡೆ ಎಂಬವರ ಹೊಲದಲ್ಲಿ ಮೊದಲು ಮಣ್ಣನ್ನು ಹದ ಮಾಡಿದರು. ನಂತರ ಗುದ್ದಲಿ ಹಿಡಿದು ಬದು ಕೊಚ್ಚಿದರು. ಇದಾದ ಬಳಿಕ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದರು. ಈ ಸಂಪ್ರದಾಯ 21 ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಅಸುರಕ್ಷತೆಯ ವಾತಾವರಣವಿದೆ, ಗನ್ ಮ್ಯಾನ್ ನೀಡಿ: ಜೆಡಿಎಸ್ ಸದಸ್ಯನ ಮನವಿ
Advertisement
Advertisement
ಹೆಗ್ಡೆ ಅವರ ಗದ್ದೆಯ ನಾಟಿ ಬಳಿಕವೇ ಉಳಿದವರು ನಾಟಿ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೆಗ್ಡೆ ಅವರ ಗದ್ದೆಯಲ್ಲಿ ನಾಟಿ ಮಾಡುವ ದಿನ ಮನೆಗೊಬ್ಬರು ಬಂದು ಕೆಲಸವನ್ನು ಮಾಡುತ್ತಾರೆ. ರಾಮಚಂದ್ರ ಹೆಗ್ಡೆ ಮನೆತನವು ಪಾಳೇಗಾರರು, ಪಟೇಲರು ಎಂದೇ ಖ್ಯಾತಿಯನ್ನು ಪಡೆದಿದೆ. ಈ ಸಂಪ್ರದಾಯವು ಸುಮಾರು 5 ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಬಂದು ನಾಟಿಯನ್ನು ಮಾಡಿದರು. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಸಾಧನೆ ಶ್ಲಾಘಿಸಿದ ಮೋದಿ