ಬೀದರ್: ಶಾಸಕ ಸಿದ್ದು ಪಾಟೀಲ್ ಮತ್ತು ಎಂಎಲ್‌ಸಿ ಭೀಮರಾವ್ ಪಾಟೀಲ್ ನಡುವೆ ಕೆಡಿಪಿ (KDP)ಸಭೆಯಲ್ಲಿ ಗಲಾಟೆ ಉಂಟಾದ ಹಿನ್ನೆಲೆ ಹುಮನಾಬಾದ್ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.
ಸೋಮವಾರ (ಜ.5) ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ ಝಿರಾ ಟ್ರಸ್ಟ್ ಜಾಗದಲ್ಲಿ ಅಕ್ರಮವಾಗಿರುವ ವಿಚಾರಕ್ಕೆ ಹುಮನಾಬಾದ್ ಸಿದ್ದು ಪಾಟೀಲ್ ಮತ್ತು ಎಂಎಲ್‌ಸಿ ಭೀಮರಾವ್ ಪಾಟೀಲ್ ಗಲಾಟೆಯಾಗಿ, ಕೈ ಕೈ ಮಿಲಾಯಿಸಿಕೊಂಡಿದ್ದರು. ಹೀಗಾಗಿ ಸದ್ಯ ಹುಮನಾಬಾದ್ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಾದ್ಯಂತ ಯಾವುದೇ ಅಹಿತಕರ ಘಟನೆಯಾಗಬಾರದು ಎಂದು 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ:ಕೆಡಿಪಿ ಸಭೆ | ಖಂಡ್ರೆ ಎದುರೇ ಕೈ ಕೈ ಮಿಲಾಯಿಸಿಕೊಂಡ MLA, MLC
ಶಾಸಕ ಸಿದ್ದು ಪಾಟೀಲ್ ನಿವಾಸ ಮತ್ತು ಎಂಎಲ್‌ಸಿ ಭೀಮರಾವ್ ಪಾಟೀಲ್ ನಿವಾಸಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ. ಕಲಬುರಗಿ ವಲಯದ ಐಜಿಪಿ ಶಾಂತಲುಸಿನ್ನಾ ಹುಮನಾಬಾದ್‌ಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಎಸ್ಪಿ ಪ್ರದೀಪ್ ಗುಂಟಿ ಕೂಡ ಹುಮನಾಬಾದ್‌ನಲ್ಲೇ ಮೊಕ್ಕಾಂ ಹೂಡಿದ್ದಾರೆ. ಹುಮನಾಬಾದ್ ಪಟ್ಟಣದಲ್ಲಿ ಎಲ್ಲಿ ನೋಡಿದ್ರೆ ಅಲ್ಲಿ ಬ್ಯಾರಿಕೇಡ್, ಡಿಆರ್ ವಾಹನ ಮತ್ತು ಬಾರಿ ಪೊಲೀಸ್ ಬಿಗಿ ಭದ್ರತೆ ಕಾಣುತ್ತಿದೆ.ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆ – ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹ

