ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ಮಂತ್ರಿಗಿರಿ ಕಳೆದುಕೊಂಡಿರುವುದಕ್ಕೆ ನನಗೆ ವೈಯಕ್ತಿಕವಾಗಿ ನೋವಾಗಿದೆ. ಅವರು ಕೂಡ ಪ್ರಭಾವಿ ನಾಯಕರು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಂಪುಟದಿಂದ ರಮೇಶ್ ಜಾರಕಿಹೊಳಿಗೆ ಕೊಕ್ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದು, ಬಹಳಷ್ಟು ನೋವಾಗಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಕೂಡ ಪ್ರಭಾವಿ ನಾಯಕರಾಗಿದ್ದಾರೆ. ಜನರಲ್ ಕೋಟಾದಲ್ಲೂ ಗೋಕಾಕ್‍ನ ಲಿಂಗಾಯತರ ಮಧ್ಯೆ ಗೆದ್ದು ಬಂದಿದ್ದಾರೆ. ಅವರನ್ನು ಇಷ್ಟು ಬೇಗ ಸಚಿವ ಸಂಪುಟದಿಂದ ತೆಗೆಯಬಾರದಿತ್ತು ಇದು ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಸತತ ಜಾರಕಿಹೊಳಿ ಕುಟುಂಬ ಮಂತ್ರಿ ಆಗಿದ್ದು ಸಂತೋಷವಾಗಿದೆ ಎಂದು ಜಾರಕಿಹೊಳಿ ಪರ ಮಾತನಾಡಿದ್ರು.
Advertisement
Advertisement
ಯಾವ ಲಿಂಗಾಯತರನ್ನು ಕಡೆಗಣಿಸುತ್ತಿಲ್ಲ. ಎಂ.ಬಿ ಪಾಟೀಲ್ ಅಥವಾ ಬಿ.ಸಿ ಪಾಟೀಲ್ ಮಂತ್ರಿ ಆಗುತ್ತಿದ್ದಾರೆ. ಬಹಳ ಸಂತೋಷವಾಗಿದೆ. 22ರಂದು ಸಚಿವ ಸಂಪುಟ ಅಂತ ನಮ್ಮ ವರಿಷ್ಠರು ಹೇಳಿದ್ದರು. ಅವರು ಹೇಳಿದಂಗೆ ಮಾತು ಉಳಿಸಿಕೊಂಡಿದ್ದಾರೆ. ಈಗ ಎಲ್ಲವೂ ಸುಖ್ಯಾಂತವಾಗಿದೆ. ದೋಸ್ತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯನ್ನ ನಾನು ಮನಸಾರೆ ಸ್ವಾಗತಿಸುವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರೇ ಇರಲಿ, ಯಾರಿಗೂ ಕೂಡ ಮತ್ತೆ ಚುನಾವಣೆಗೆ ಹೋಗಲು ಇಷ್ಟವಿಲ್ಲ. ಈ ರಾಜ್ಯಕ್ಕೆ ಇನ್ನೊಂದು ಚುನಾವಣೆ ಹೊರೆ ಆಗಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
Advertisement
ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಸ್ಥಾನ ನೀಡಿದ್ದಕ್ಕೆ ನನಗೆ ಸಂತೋಷವಿದೆ. ಬೆಳಗಾವಿಗೆ ಎರಡು ಸಂಸದೀಯ ಸ್ಥಾನ ಮತ್ತು ಒಂದು ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಎಲ್ಲೂ ಕೂಡ ಮಂತ್ರಿ ಪದವಿ ಬೇಕು ಅಂತ ಹೇಳಿಲ್ಲ. ಹೈಕಮಾಂಡ್ ಹೇಗೆ ಹೇಳುತ್ತೆ ಅದೇ ರೀತಿ ನಡೆದುಕೊಳ್ಳುತ್ತೇನೆ. ಅದರ ಚೌಕಟ್ಟಿನಲ್ಲಿ ನಾನಿದ್ದೀನಿ. ಅವರು ಏನು ಹೇಳುತ್ತಾರೋ ಅದು ನನಗೆ ಪ್ರಸಾದ. ನಾನು ನನ್ನ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv