ಹಾಸನ: ಅಧಿವೇಶನ, ಬಿಡುವಿಲ್ಲದ ಕಾರ್ಯಕ್ರಮ, ರಾಜಕೀಯ ಜಂಜಾಟದ ನಡುವೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಯುವಕರೊಂದಿಗೆ ಕಬಡ್ಡಿ (Kabaddi) ಆಡಿ ನಲಿದಿದ್ದಾರೆ.
ಅರಸೀಕೆರೆ ತಾಲೂಕಿನ ತಾಂಡ್ಯ ಗ್ರಾಮ ಹಾಗೂ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲು ಶಿವಲಿಂಗೇಗೌಡರು ಆಗಮಿಸಿದ್ದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಶಿವಲಿಂಗೇಗೌಡ ಪಂಚೆಯಲ್ಲಿಯೇ ಎರಡು ಕಡೆ ರೈಡ್ ಮಾಡಿದರು. ಎರಡು ಕಡೆಗಳಲ್ಲೂ ಯುವಕರು ಶಾಸಕರನ್ನು ಟ್ಯಾಕಲ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ
ಶಾಸಕರು ಕಬಡ್ಡಿ ಆಡಿರುವುದಕ್ಕೆ ಯುವಕರು ಫಿದಾ ಆಗಿ ಶಿಳ್ಳೆ, ಚಪ್ಪಾಳೆ ಹೊಡೆದು ಸಂತಸಪಟ್ಟಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ರಿಲಾಕ್ಸ್ ಮೂಡ್‌ನಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ಆಡುವ ಮೂಲಕ ಇತರ ಶಾಸಕರಿಗಿಂತ ಭಿನ್ನ ಎನಿಸಿಕೊಂಡರು. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್