ಬೆಂಗಳೂರು: ವಿಧಾನಸಭೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ (Karemma Nayak) ಅಳಲು ತೋಡಿಕೊಂಡ ಘಟನೆ ನಡೆಯಿತು. ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಅದನ್ನು ಬಂದ್ ಮಾಡಿಸುವ ಪ್ರಯತ್ನ ಮಾಡಿದೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತ ಮಾತಾಡ್ತಾರೆ ಅಂತಾ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡಿದ್ರು.
ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಅಧಿಕಾರಿಗಳು ನಾನೊಬ್ಬ ಶಾಸಕಿ ಅನ್ನೋದನ್ನೇ ಪರಿಗಣಿಸದೇ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಮಟ್ಕಾ ದಂಧೆ ಬಂದ್ ಮಾಡಿಸಿದರೂ ಪೊಲೀಸರು ಸಹಕಾರ ನೀಡ್ತಿಲ್ಲ. ಶಿಷ್ಟಾಚಾರಕ್ಕೂ ಪೊಲೀಸರು ಶಾಸಕಿ ಅಂತ ನನಗೆ ಗೌರವ ನೀಡ್ತಿಲ್ಲ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ರು.
Advertisement
Advertisement
ಶಿಷ್ಟಾಚಾರವನ್ನೂ ಪೊಲೀಸರು ಪಾಲಿಸುತ್ತಿಲ್ಲ. ಮಾಜಿ ಶಾಸಕರು ಪೊಲೀಸರಿಗೆ ಹೆದರಿಸ್ತಿದ್ದಾರೆ. ಆರೇ ತಿಂಗಳಿಗೆ ಚುನಾವಣೆ ಮಾಡಿಸ್ತೀನಿ ಅಂತ ಪೊಲೀಸರಿಗೆ ಮಾಜಿ ಶಾಸಕರು ಹೇಳ್ತಿದ್ದಾರೆ. ಇದರಿಂದ ನನಗೆ ಆತಂಕ ಆಗ್ತಾ ಇದೆ. ನನ್ನ ಸಹೋದರನ ತಮ್ಮನ ಮೇಲೆ ಮರಳು ದಂಧೆಯವರು ಹಲ್ಲೆ ಮಾಡಿದ್ದಾರೆ. ನನಗೆ ಸೂಕ್ತ ಭದ್ರತೆ ಸರ್ಕಾರ ಒದಗಿಸಬೇಕು ಅಂತಾ ಮನವಿ ಮಾಡಿದ್ರು. ಇದನ್ನೂ ಓದಿ: ಪೆನ್‌ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ
Advertisement
Advertisement
ಮೊನ್ನೆ ಯಾರೋ ಒಬ್ಬ ಅನಾಮಿಕ ವ್ಯಕ್ತಿ ಬಂದು ಸದನದಲ್ಲಿ ನನ್ನ ಸೀಟಿನಲ್ಲಿ ಕೂತಿದ್ದು ಇನ್ನೂ ಏನಾಗತ್ತೋ ಅನ್ನೋ ಆತಂಕ ಮೂಡಿಸುತ್ತಿದೆ. ಸರ್ಕಾರ ನನಗೆ ಭದ್ರತೆ ನೀಡಬೇಕು ಎಂದು ಅಳಲು ತೋಡಿಕೊಂಡ್ರು. ಶಾಸಕಿಗೆ ಸ್ಪೀಕರ್ ಖಾದರ್ ಭರವಸೆ ನೀಡಿದ್ರು. ನಿಮ್ಮ ಆತಂಕದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಗೃಹ ಸಚಿವರ ಜೊತೆಗೆ ನಾನೂ ಮಾತಾಡ್ತೇನೆ. ಆದರೆ ಅನಾಮಿಕ ವ್ಯಕ್ತಿ ಬಂದು ಕುಳಿತುಕೊಂಡ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅವರು ಬಂದಾಗ ನೀವು ಬೇಗ ಬಂದಿರಲಿಲ್ಲ. ಖುರ್ಚಿ ಖಾಲಿ ಇದೆ ಅಂತ ಆತ ಅಲ್ಲಿಯೇ ಕೂತುಕೊಂಡ. ನೀವು ಬೇಗ ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಅಂತೇಳಿದ್ರು.
Web Stories