ಕೋಲಾರ: ಬೆಂಗಳೂರಿನ ಕೆಪಿಸಿಸಿ ಕಚೇರಿ (Bengaluru KPCC Office) ಯಲ್ಲಿ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ (Congress Party) ಸೇರುವುದಾಗಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ (MLA H Nagesh) ಹೇಳಿದ್ದಾರೆ. ಮುಳಬಾಗಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಬಾವುಟ ಹಿಡಿದುಕೊಂಡೆ ನಾನು ರಾಜಕೀಯಕ್ಕೆ ಬಂದಿದ್ದು, ಮೊದಲಿನಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದವನು. ಕಳೆದ ಬಾರಿ ನನಗೆ ಬಿ-ಫಾರಂ ಸಿಕ್ಕಿರಲಿಲ್ಲ ಅದಕ್ಕಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ, ಸದ್ಯ ನಾನು ಕಾಂಗ್ರೆಸ್ ನಲ್ಲಿರೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ.
Advertisement
ನಮ್ಮ ತಾತನವರ ಕಾಲದಿಂದಲೂ ನಾನು ಕಾಂಗ್ರೆಸ್, ನನ್ನ ತಾಲೂಕಿನಲ್ಲಿ ಕೆಲಸ ಕಾರ್ಯಗಳು ಆಗಲಿ ಅನ್ನೋ ಕಾರಣಕ್ಕೆ ಬಿಜೆಪಿ (BJP) ಗೆ ಬೆಂಬಲ ಸೂಚಿಸಿದ್ದೆ. ಪಕ್ಷೇತರನಾಗಿ ಗೆದ್ದು ನನಗೆ ಅನುದಾನಗಳು ಬೇಕು ಅದಕ್ಕಾಗಿ ನಾನು ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿದ್ದೆವು ಎಂದು ಸ್ಪಷ್ಟ ಪಡಿಸಿದ್ರು. ಅಲ್ಲದೆ ಶನಿವಾರ ಬೆಂಗಳೂರಿನ ಕೆಪಿಸಿಸಿ ಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಮಹದೇವ ಪುರ ನಾನು ಹುಟ್ಟು ಬೆಳೆದ ಊರು, ಮಹದೇವಪುರದ ಜನ ನನ್ನನ್ನು ಕರೆಯುತ್ತಾ ಇದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ನೀಡಿ ಮಾತನಾಡಿದ್ದೇನೆ. ನೋಡೋಣಪ್ಪ ಬಾ ಎಂದು ಹೇಳಿದ್ದಾರೆ. ಮೊದಲು ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಬಳಿಕ ಪಕ್ಷ ನಿರ್ಧಾರ ಮಾಡಲಿದೆ ಎಂದರು. ಇದನ್ನೂ ಓದಿ: ಮೋದಿ ಬ್ರಹ್ಮಾಸ್ತ್ರದ ನಡುವೆ ಬಿಜೆಪಿ ಮಠದ ರಾಜಕೀಯ ಶುರು
Advertisement
Advertisement
ಸಿದ್ದರಾಮಯ್ಯ (Siddaramaiah) ಕೋಲಾರಕ್ಕೆ ಬರೋದು ಒಳ್ಳೆಯದು, ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಅವರು ಬಂದ್ರೆ ಬಹಳ ಒಳಿತಾಗುತ್ತೆ. ಬಿಜೆಪಿ ಪಕ್ಷ ಬಿಡೋದು ಅನ್ನೋದಕ್ಕಿಂತ ನನಗೆ ಕೆಲಸ ಆಗಬೇಕಿತ್ತು, ಜನರ ಅಭಿವೃದ್ಧಿ ಮುಖ್ಯ, ಚುನಾವಣೆ (Election) ಸಂದರ್ಭದಲ್ಲಿ ನನಗೂ ಒಂದು ನೆಲೆ ಬೇಕಲ್ಲ. ಪಕ್ಷ ಸೇರ್ಪಡೆಯಾಗಿ ನಾನು ಕಾಂಗ್ರೆಸ್ ಅಭ್ಯರ್ಥಿಯಾದ ಮೇಲೆ ಕೆಲವು ವಿಚಾರಗಳನ್ನ ಮಾತನಾಡುವೆ ಎಂದು ಹೇಳಿದ್ದಾರೆ.
Advertisement
ಡಾ.ಬಿ.ಆರ್. ಅಂಬೇಡ್ಕರ್ (Dr. B R Ambedkar) ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬೆಂಗಳೂರಿನ ಮಹದೇವಪುರದಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುತ್ತದೆಯೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k