ಬೆಳಗಾವಿ: ದಿ.ದೇವರಾಜ್ ಅರಸು ಹಾಗೂ ರಾಜೀವ ಗಾಂಧಿ ಜನ್ಮ ದಿನದ ನಿಮಿತ್ಯವಾಗಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನ ಗೂಗಲ್ ಆ್ಯಪ್‍ನ್ನು ಸಂಸದ ಪ್ರಕಾಶ ಹುಕ್ಕೇರಿ ಇಂದು ಬಿಡುಗಡೆ ಮಾಡಿದರು.
ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 1300 ಜನರಿಗೆ ಉಚಿತ ಗ್ಯಾಸ್ ವಿತರಣಾ ಸಮಾರಂಭದಲ್ಲಿ ಈ ಆ್ಯಪ್ ನ್ನು ಬಿಡುಗಡೆಗೊಳಿದರು.
Advertisement
ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾದರಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನಲ್ಲಿ ಸರಕಾರದ ವಿವಿಧ ಯೋಜನೆಗಳ ಕುಂದು ಕೊರೆತೆಯನ್ನು ನಿವಾರಿಸಲು ಈ ಗೂಗಲ್ ಆ್ಯಪ್ ಹಾಗೂ ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನ ಸಿದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಶಾಸಕರಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.
Advertisement
ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಂಧ್ಯಾ ಸುರಕ್ಷಾ, ಪಿಂಚಣಿ, ವಿಧವಾ ವೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನ ಪಡೆದುಕೊಳ್ಳಲು ಈ ಆ್ಯಪ್ ಮೂಲಕ ಸಂಪರ್ಕ ಮಾಡಲಾಗಿದೆ. ಹಾಗಾಗಿ ತಕ್ಷಣವೇ ಫಲಾನುಭವಿಗಳನ್ನ ಸಂಪರ್ಕಿಸಿ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಯೋಜನೆಯನ್ನ ಅನುಷ್ಠಾನಗೊಳಿಸಿದೆ. ನಂತರ ಶಾಸಕರೇ ಅವರ ಮನೆಗೆ ಹೋಗಿ ಯೋಜನೆಯ ಆದೇಶ ಪ್ರತಿಗಳನ್ನು ಹಸ್ತಾಂತರಿಸಲು ಈ ಆ್ಯಪ್‍ನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
Advertisement
ಪ್ರತಿಯೊಬ್ಬರ ಮನೆಯಲ್ಲೂ ಈಗ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿರುವ ಕಾರಣ ಈ ಆ್ಯಪ್ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.