ಬೆಂಗಳೂರು: ರಾಜ್ಯ ರಾಜಕಾರಣದ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿ ಸುದ್ದಿಯಾಗಿದ್ದ ಕಾಂಗ್ರೆಸ್ ಪಕ್ಷದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ನಾನು ಎಂದಿಗೂ ಆಪರೇಷನ್ ರಾಜಕಾರಣಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕೆಲ ಶಾಸಕರು ಮುಂಬೈ ತೆರಳುತ್ತಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಶಾಸಕ ಸುಧಾಕರ್ ಅವರು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತರೊಂದಿಗೆ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಸುದ್ದಿ ರಾಜಕೀಯ ಪಿತೂರಿಗೆ ಕಾರಣವಾಗಿರುವುದು ಶಾಕ್ ನೀಡಿದೆ. ನಾನು ಹಾಗೂ ಹೊಸಕೋಟೆ ಶಾಸಕರಾದ ಎಂಟಿಬಿ ನಾಗರಾಜ್ ಮತ್ತು ಕೆಲ ಸ್ನೇಹಿತರು ತಮಿಳುನಾಡಿನ ದೇವಾಲಯಕ್ಕೆ ಇಂದು ಭೇಟಿ ನೀಡಿದ್ದೆವು. ಆದರೆ ಮಾಧ್ಯಮಗಳು ಇವುಗಳನ್ನು ಆಪರೇಷನ್ ಕಮಲ ಎಂದು ಅರ್ಥೈಸಿದೆ ಎಂದು ತಿಳಿಸಿದ್ದಾರೆ.
Advertisement
https://twitter.com/mla_sudhakar/status/1043516012136677378
Advertisement
ಮತ್ತೊಂದು ಟ್ವೀಟ್‍ನಲ್ಲಿ ನಾನು ಡಾಕ್ಟರ್ ಆಗಿದ್ದು, ಆಪರೇಷನ್‍ಗೆ ಒಳಗಾಗುವುದಿಲ್ಲ. ನಾನು ಯಾವಾಗಲೂ ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ. ಅಲ್ಲದೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವ ಹಾಗೂ ಪಕ್ಷದ ಸಿದ್ಧಾಂತಗಳನ್ನು ನಂಬುತ್ತೇನೆ ಎಂದು ರಾಹುಲ್ ಗಾಂಧಿ ಜೊತೆ ಇರುವ ತನ್ನ ಫೋಟೋವನ್ನು ಹಾಕಿಕೊಂಡಿದ್ದಾರೆ.
Advertisement
It's deeply shocking how a visit to a temple with one's friends can be flagged as a political conspiracy!
I had visited a temple in TN with M. T. B Nagraj & few of my friends. Now, few media channels are tagging it as 'Operation Kamala'. (1/2) pic.twitter.com/lq83ojP4z7
— Dr Sudhakar K (@mla_sudhakar) September 22, 2018
Advertisement
ಸಮ್ಮಿಶ್ರ ಸರ್ಕಾರದ ರಚನೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಸಚಿವ ಆಕಾಂಕ್ಷಿಯಾಗಿರುವ ಶಾಸಕ ಸುಧಾಕರ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದಾದ ಬಳಿಕ ಹಲವು ಬಾರಿ ಸಮ್ಮಿಶ್ರ ಸರ್ಕಾರ ಹಾಗೂ ಕೆಲ ಪಕ್ಷದ ವಿರುದ್ಧವೇ ಸುಧಾಕರ್ ಅಸಮಾಧಾನ ಹೊರಹಾಕಿದ್ದರು. ಈ ಮೂಲಕ ಪಕ್ಷದ ಅತೃಪ್ತರ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದ್ದರು.
ಮಾಧ್ಯಮಗಳಲ್ಲಿ ಇಂತಹ ಸುದ್ದಿ ಪ್ರಸಾರವಾಗುತ್ತಿದಂತೆ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಸುಧಾಕರ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದರು. ಈ ವೇಳೆ ಸಿಎಂ ಎಚ್‍ಡಿಕೆಗೆ ಸುಧಾಕರ್ ಅವರು ತಾವು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಸೋಮವಾರ ಭೇಟಿ ಮಾಡುವುದಾಗಿ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv