ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯವರು ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಖತ್ ಡ್ಯಾನ್ಸ್ ಮಾಡಿ ನೋಡುಗರನ್ನು ರಂಜಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಮೌಲಾನ ಆಜಾದ್ ಎಂಎಸ್‍ಡಬ್ಲ್ಯೂ ಮಹಾವಿದ್ಯಾಲಯ ನಣದಿಯವರ ಸಂಯುಕ್ತಾಶ್ರಯದಲ್ಲಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಗ್ರಾಮೀಣ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕಿಯಾದ ಶಶಿಕಲಾ ಜೊಲ್ಲೆಯವರು ಸಹ ಪಾಲ್ಗೊಂಡಿದ್ದರು.
ಈ ವೇಳೆ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮರಾಠಿ ಹಾಡೊಂದಕ್ಕೆ ವಿದ್ಯಾರ್ಥಿಗಳ ಜೊತೆಯಲ್ಲೆ ಹೆಜ್ಜೆಹಾಕಿದರು. ಅವರು ಡ್ಯಾನ್ಸ್ ಮಾಡಿದ ಶೈಲಿ ವಿದ್ಯಾರ್ಥಿಗಳನ್ನೇ ನಾಚಿಸುವಂತೆ ಕುಣಿದು ಎಲ್ಲರ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿರುಚಿಯನ್ನು ಹೊಂದಿರುವ ಶಾಸಕಿ ಮತ್ತೊಮ್ಮೆ ಡ್ಯಾನ್ಸ್ ಮಾಡುವ ಮೂಲಕ ನೋಡುಗರನ್ನು ರಂಜಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=AVMv_SuOLMw