ಚಿಕ್ಕಮಗಳೂರು: ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದ ಬಿಜೆಪಿ ಮುಖಂಡ ಮಹಮದ್ ಅನ್ವರ್ ಅವರನ್ನು ಜೈಲಿನಲ್ಲಿ ಇದ್ದುಕೊಂಡೇ ಆಗಂತುಕರು ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ ಅಂತ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಕಾಣುತ್ತಿದ್ದ ಹತ್ಯಾ ರಾಜಕಾರಣ ಚಿಕ್ಕಮಗಳೂರಿನಲ್ಲಿಯೂ ಕಾಲಿಟ್ಟಿರುವುದು ಬಹಳ ಗಂಭೀರವಾದ ವಿಷಯ ಅಂತ ಹೇಳಿದ್ರು.
Advertisement
ಮೃತ ಮಹಮದ್ ಅನ್ವರ್ ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದನು. ಇದೀಗ ಆಗಂತುಕರು ಜೈಲಿನಲ್ಲಿ ಇದ್ದುಕೊಂಡೇ ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕಿದೆ ಅಂತ ತಿಳಿಸಿದ್ರು.
Advertisement
ಜೈಲಿನಿಂದಲೇ ಕೊಲೆ ಮಾಡಿಸಲು ಅವಕಾಶ ಕೊಟ್ಟಿರುವುದರ ಬಗ್ಗೆಯೂ ತನಿಖೆ ನಡೆಯಬೇಕು. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಚಿಕ್ಕಮಗಳೂರು ಜನತೆ ಹತ್ಯೆಯನ್ನು ಖಂಡಿಸಿ ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‍ಮಾಡಿ ಮೃತರಿಗೆ ಗೌರವ ಸಲ್ಲಿಸಬೇಕು ಅಂತ ಇದೇ ವೇಳೆ ಕರೆ ಕೊಟ್ಟರು.
Advertisement
BJP General Secretary of Chikmagalur, Anwar was killed by bike borne assailants in Gowri Kaluve area, last night at around 9.30 pm. #Karnataka pic.twitter.com/QFFT0HQB5w
— ANI (@ANI) June 23, 2018
Advertisement
ಏನಿದು ಪ್ರಕರಣ?:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತನೆಂದೇ ಗುರುತಿಸಿಕೊಂಡಿದ್ದ ಹಾಗೂ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಲ್ವಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಅನ್ವರ್(40) ಅವರನ್ನು ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಗೌರಿ ಕಾಲುವೆ ಬಳಿ ಉಪ್ಪಳ್ಳಿ ನಿವಾಸಿಯಾಗಿರೋ ಅನ್ವರ್ ರನ್ನ ದುಷ್ಕರ್ಮಿಗಳು ಚೂರಿಯಿಂದ ಐದು ಬಾರಿ ಇರಿದಿದ್ದಾರೆ. ಹೊಟ್ಟೆಯಲ್ಲಿರುವ ಕರುಳು ಕಿತ್ತು ಬರುವಂತೆ ಅನ್ವರ್ ನ ಹೊಟ್ಟೆ ಸೀಳಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಅನ್ವರ್ ನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.