ಮಂಡ್ಯ: ಬೆಂಗಳೂರು-ಹಾಸನ ನೂತನ ರೈಲು ಮಾರ್ಗ ಇಂದು ಉದ್ಘಾಟನೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರಿಗೆ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ, ಬಿಜಿ ನಗರ ರೈಲ್ವೆ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ನೆನಪಿಸಿಕೊಂಡ ಚಲುವರಾಯಸ್ವಾಮಿ 20 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಯೋಜನೆ ತುಂಬಾ ನಿಧಾನಗತಿಯಲ್ಲಿ ಪೂರ್ಣಗೊಂಡಿದೆ. ನೂತನ ರೈಲು ಆರಂಭದಿಂದ ನಾಗಮಂಗಲ ಭಾಗದ ಜನ ತುಂಬಾ ಸಂತೋಷಗೊಂಡಿದ್ದಾರೆ. ಈ ಯೋಜನೆ ಪೂರ್ಣಗೊಳ್ಳಲು ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ ಸೇರಿದಂತೆ ಹಲವರು ಕಾರಣರಾಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ನಮಗೆ ಯುಗಾದಿ ಕೊಡುಗೆ ಎಂದು ಹರ್ಷ ವ್ಯಕ್ತಪಡಿಸಿದ್ರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ಸಂಸದ ಸಿಎಸ್.ಪುಟ್ಟರಾಜು ನೂತನ ರೈಲು ಆರಂಭ ಸಂತಸ ತಂದಿದೆ. ರೈಲು ಬಂದ ತಕ್ಷಣ ಎಲ್ಲರೂ ದೇವೇಗೌಡರಿಗೆ ಜೈಕಾರ ಹಾಕುತ್ತಿದ್ದಾರೆ. ಇದನ್ನ ನೋಡಿದ್ರೆ ಒಳ್ಳೇ ಕೆಲಸ ಯಾವಾಗಲೂ ಉಳಿಯುತ್ತೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂತಾ ಹೇಳಿದ್ರು.
ಇದನ್ನೂ ಓದಿ: ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ