ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸಲ್ಲಿ (Biklu Shiva)ಅರೆಸ್ಟ್ ಆಗಿರುವ ಶಾಸಕ ಬೈರತಿ ಬಸವರಾಜ್ (Byrati Basavaraj) ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 10 ಗಂಟೆ ಸುಮಾರಿಗೆ ಆಂಜಿಯೋಗ್ರಾಂ ನಡೆಯಲಿದೆ. ಇದರ ಜೊತೆ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಸಹ ವೈದ್ಯರು ನಡೆಸಲಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬೈರತಿ ಬಸವರಾಜ್‌ಗೆ ಒಂದು ದಿನದ ರಿಲೀಫ್
ಆಸ್ಪತ್ರೆಯಲ್ಲಿರೋ ಬಸವರಾಜ್ ಅವರ ಕೊಠಡಿ ಬಳಿ ಯಾರಿಗೂ ಪ್ರವೇಶವಿಲ್ಲ. ಸಿಐಡಿಯ ಓರ್ವ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ಟೀಂ ನಿಗಾವಹಿಸಿದೆ. ಅಲ್ಲದೇ ಸ್ಥಳೀಯ ತಿಲಕ್ ನಗರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈಗಾಗಲೇ ಬ್ಲಡ್ ಸ್ಯಾಂಪಲ್ ಪಡೆಯಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ಬಳಿಕ ನ್ಯಾಯಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್ – ಬೈರತಿ ಬಸವರಾಜ್‌ಗೆ ಮೆಡಿಕಲ್ ಟೆಸ್ಟ್, ಕೋರ್ಟ್‌ಗೆ ಹಾಜರು ಪಡಿಸಲಿರೋ ಸಿಐಡಿ

