ಬೆಂಗಳೂರು: ನಾವು ಎಲ್ಲೋ ಹೋಗುವುದಿಲ್ಲ, ಸದ್ಯಕ್ಕೆ ಅದು ದೂರವಾದ ಮಾತಾಗಿದೆ. ನಮ್ಮನ್ನು ಈ ಬಗ್ಗೆ ಯಾರು ಕೂಡ ಸಂಪರ್ಕ ಮಾಡಿಲ್ಲ ಎಂದು ಹಾವೇರಿಯ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿರುವ ದೋಸ್ತಿ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಮತ್ತೆ ಬಿಜೆಪಿ ಆಪರೇಷನ್ ಕಮಲವನ್ನು ಶುರುಮಾಡಿದೆ ಎನ್ನಲಾದ ಆಡಿಯೋ ಒಂದು ಔಟ್ ಆಗಿದ್ದು, ಅದರಲ್ಲಿ 10 ಕಾಂಗ್ರೆಸ್ ಶಾಸಕರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಇತ್ತು. ಶಾಸಕರ ಪಟ್ಟಿಯಲ್ಲಿ ಬಿ.ಸಿ ಪಾಟೀಲ್ ಹೆಸರು ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ದೋಸ್ತಿ ಸರ್ಕಾರವೇ ಬೆಚ್ಚಿ ಬೀಳುವಂತಹ ಬೆಳವಣಿಗೆ – ಗುಪ್ತಚರ ಇಲಾಖೆ ನೀಡಿದ್ದ ಆಡಿಯೋ ಔಟ್
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ಎಲ್ಲೋ ಹೋಗುವುದಿಲ್ಲ, ಸದ್ಯಕ್ಕೆ ಅದು ದೂರವಾದ ಮಾತಾಗಿದೆ. ನಮ್ಮನ್ನು ಈ ಬಗ್ಗೆ ಯಾರು ಕೂಡ ಸಂಪರ್ಕ ಮಾಡಿಲ್ಲ. ಅವರು ನಮ್ಮನ್ನ ಕರೆದುಕೊಂಡು ಹೋಗೋಕೆ ಅವರು ನಮ್ಮನ್ನು ಗೆಲ್ಲಿಸಲಿಲ್ಲ. ಅದೆಲ್ಲಾ ಸುಳ್ಳಾಗಿದ್ದು, ಸತ್ಯಕ್ಕೆ ದೂರವಾದ ಮಾತಾಗಿದೆ. ನಾನು ಗ್ರಾಮದಲ್ಲಿ ಇದ್ದೀನಿ ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
Advertisement
ಶ್ರೀರಾಮುಲು ಆಪ್ತ ಉದ್ಯಮಿ ಆಡಿಯೋ ಕೇಳಿದರೆ ನಗು ಬರುತ್ತದೆ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಕೇಳಬೇಕು ಎಂದು ಹೇಳಿದರು.
Advertisement
ಇಂದು ಮುಂಜಾನೆ ಗುಪ್ತಚರ ಇಲಾಖೆ ಬಿಜೆಪಿ ನಾಯಕರ ಆಪರೇಷನ್ ಕಮಲದ ತಂತ್ರಗಾರಿಕೆ ಕುರಿತ ಆಡಿಯೋ ಒಂದನ್ನ ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದ್ದು ಈಗ ಅದು ಔಟ್ ಆಗಿತ್ತು. 3 ನಿಮಿಷ 44 ಸೆಕೆಂಡ್ ಇರುವ ಆಡಿಯೋದಲ್ಲಿ ರಾಮುಲು ಆಪ್ತ ಮತ್ತು ದುಬೈ ಮೂಲದ ಉದ್ಯಮಿ ಮಾತನಾಡಿದ್ದರು. ಮಾಜಿ ಸಚಿವ ಶ್ರೀರಾಮುಲು ಆಪ್ತರೊಬ್ಬರು ದುಬೈ ಮೂಲದ ಉದ್ಯಮಿ ಜೊತೆ ಆಪರೇಷನ್ ಕಮಲಕ್ಕೆ ಹಣಕಾಸಿನ ನೆರವು ಕೇಳಿ ಸಂಭಾಷಣೆ ನಡೆಸಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಆಪರೇಷನ್ ಕಮಲದ ಯತ್ನ ದುಬೈವರೆಗೂ ತಲುಪಿದ್ದು, ಅಲ್ಲಿಂದಲು ಹಣಕಾಸಿನ ನೆರವು ಸಿಗುತ್ತಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆಗೆ ನೀಡಿದೆ ಎಂದು ಮೂಲಗಳು ತಿಳಿಸಿತ್ತು.
ಈ ಆಡಿಯೋದಲ್ಲಿ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೋಳಿ, ಆನಂದ್ ಸಿಂಗ್, ನಾಗೇಂದ್ರ, ಗಣೇಶ್, ಭೀಮಾ ನಾಯಕ್, ಬಿ.ಸಿ.ಪಾಟೀಲ್, ಪ್ರತಾಪ ಗೌಡ ಪಾಟೀಲ್ ಸೇರಿದಂತೆ 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನುವ ವಿಚಾರ ಪ್ರಸ್ತಾಪವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv