ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಹೈಡ್ರಾಮಾದ ವೇಳೆ ಅಸ್ವಸ್ಥರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal Health) ಆರೋಗ್ಯ ಸ್ಥಿರವಾಗಿದೆ.
ಈ ಸಂಬಂಧ ಸ್ವತಃ ಶಾಸಕರೇ ಟ್ವೀಟ್ ಮಾಡಿದ್ದು, ನಾನು ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ.
ನಾನು ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ
ಜೈ ಶ್ರೀರಾಮ ????????????
— Basanagouda R Patil (Yatnal) (@BasanagoudaBJP) July 19, 2023
ಶಾಸಕರ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯ ಅಬ್ದುಲ್ ಖಾದರ್, ಎಮರ್ಜೆನ್ಸಿ ವೈದ್ಯ ನಾನು. ತಲೆ ಸುತ್ತು ಅಂತ ಎಮರ್ಜೆನ್ಸಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಬಂದ್ರು. ಇಸಿಜಿ, ಎಕೋ ನಾರ್ಮಲ್ ಇದೆ. ಕಾರ್ಡಿಯಲಾಜಿಸ್ಟ್ ನೋಡಿದ್ದಾರೆ. ನಾರ್ಮಲ್ ಆಗಿದ್ದಾರೆ. 24 ಗಂಟೆ ನಿಗಾದಲ್ಲಿರಬೇಕು. ಬಿಪಿ ಹೆಚ್ಚಿದೆ, ಚಿಕಿತ್ಸೆ ನೀಡ್ತಿದ್ದೇವೆ ಎಂದರು.
ಐಸಿಯುನಲ್ಲಿ ದಾಖಲು ಮಾಡಿ, ಚಿಕಿತ್ಸೆ ಮುಂದುವರಿಸಿದ್ದೇವೆ. ವೈಟಲ್ ಪ್ಯಾರಮೀಟರ್ಸ್ (Vital Parameters) ಸ್ಥಿರವಾಗಿದೆ. ಸದ್ಯ ಆರೋಗ್ಯದಲ್ಲಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ
ಕುಸಿದು ಬಿದ್ದ ಶಾಸಕ: ಸದನದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ ಸ್ಪೀಕರ್ ಯುಟಿ ಖಾದರ್, 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿದರು. ಸಸ್ಪೆಂಡ್ ಆದ ಬಳಿಕವೂ ಬಿಜೆಪಿ ಸದಸ್ಯರು ಸದನದೊಳಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾರ್ಷಲ್‍ಗಳು ಅಮಾನತಾದ ಶಾಸಕರನ್ನು ಸದನದಿಂದ ಹೊರಹಾಕುವ ಕೆಲಸ ಮಾಡಿದರು. ಈ ವೇಳೆ ಸ್ಥಳದಲ್ಲಿ ನೂಕಾಟ ತಳ್ಳಾಟ ಜೋರಾಗಿ, ಶಾಸಕರು ವಿಧಾನಸಭೆಯ ಆವರಣದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಅಂಬುಲೆನ್ಸ್‍ನಲ್ಲಿ ಫೋರ್ಟಿಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
Web Stories