ವಿಜಯಪುರ: ನನ್ನ ವಿರುದ್ಧ ಮಾತನಾಡಲೆಂದೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಕೆಲವು ಹಂದಿ ಹಾಗೂ ಬೀದಿನಾಯಿಗಳನ್ನು ಬಿಟ್ಟಿದ್ದಾನೆ ಎಂದು ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೆಲವು ಹಂದಿ, ಬೀದಿನಾಯಿಗಳು ಬೊಗಳುತ್ತಿರುತ್ತವೆ. ಈ ಹಂದಿ, ಬೀದಿ ನಾಯಿಗಳ ಬಗ್ಗೆ ಕೇಳಬೇಡಿ. ಅದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿಗೆ (Murugesh Nirani) ಛಾಟಿ ಬೀಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಮೈಸೂರು ಮಹಾರಾಜರ ಹೆಸರು ಇಡಬೇಕು. ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿಯಾಗಿದೆ. ಏಷ್ಯಾದಲ್ಲಿ ಮೊದಲು ವಿದ್ಯುತ್ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಸಮಯದಲ್ಲಿ ಎಂದು ಹೇಳಿದರು.
ಉತ್ತರ ಕರ್ನಾಟಕ ಯಾಕೆ ಅಭಿವೃದ್ಧಿ ಆಗಲಿಲ್ಲ ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದಿಲ್‍ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದರು. ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣಕ್ಕೆ ಮಹಾರಾಜರ ಹೆಸರಿಡಬೇಕು: ಯತ್ನಾಳ್