ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಯತ್ನಾಳ್ ಪ್ರಶ್ನೆ

Public TV
1 Min Read
Yatnal

ಧಾರವಾಡ: ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ..? ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೇ ನಾನು, ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ವಾಜಪೇಯಿ ಪತ್ರ ಕೊಟ್ಟಿದ್ದರು. ಅಟಲ್‍ಜೀ ಹಸ್ತಾಂಕ್ಷರದಿಂದ ಪತ್ರ ಪಡೆದ ವ್ಯಕ್ತಿ ನಾನು. ಆದರೆ ದುರ್ದೈವ ಅಂದ್ರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು, ಚಮಚಾಗಿರಿ ಮಾಡಬೇಕು. ಅದನ್ನು ನಾನು ಮಾಡೋದಿಲ್ಲ. ಒಂದು ಕಾಲು ಹಿಡಿಯೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Congress flag 2 e1573529275338

 

ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡೇ ದಿನ ಕೊಟ್ಟರು, ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡೊದಿಲ್ಲ, ಇದು ದುರಂತ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ಸಿನ ಸರ್ವನಾಶಕ್ಕೆ ಅವರೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ: ಪ್ರತಾಪ್ ಸಿಂಹ

siddaramaiah

ಹಾಡಿದ್ದು ಹಾಡೋ ಕಿಸಬಾಯಿದಾಸ ಅಂತಾರಲ್ಲ, ಹಾಗೇ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೇ ಬೇರೆ ಗೊತ್ತಿಲ್ಲ. ನಾವು ಎಲ್ಲ ಸಮುದಾಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ, ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಸಮುದಾಯ 50 ಸಾವಿರ ಇದೆ. ಹಾನಗಲ್, ರಾಣೆಬೆನ್ನೂರನಲ್ಲಿಯೂ 50 ಸಾವಿರ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ನಾವು ಹೆಚ್ಚಿದ್ದೇವೆ, ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ ಅಂತಾ ಕೇಳಿದ್ದೇವೆ. ಯಾರಿಗೂ ಬೆದರಿಕೆ, ಅಂಜಿಕೆ ಹಾಕಿಲ್ಲ. ಬೊಮ್ಮಾಯಿಯವರು ಮೀಸಲಾತಿ ಕೊಡಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿದೆ. ಆ ದಿಕ್ಕಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

BELLAD 2 1

ಅರವಿಂದ್ ಬೆಲ್ಲದ್ ಸಚಿವರಾಗಬೇಕು. ಅವರು ಸಚಿವರಾಗಲು ಅವರದ್ದೇ ಆದ ಅರ್ಹತೆ ಇದೆ. ನಾನು ಕೇಳುತ್ತಿರೋದು ಎಲ್ಲ ಸಮುದಾಯಗಳ ನ್ಯಾಯ ಮಾತ್ರ, ಆ ನ್ಯಾಯ ಕೊಟ್ಟರೆ ಮಾತ್ರ ನಾನು ಸಚಿವ ಸಂಪುಟ ಸೇರುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *