ಜೈಪುರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರನ್ನು ಶುದ್ಧೀಕರಣ ಮಾಡಿರುವ ಪ್ರಸಂಗ ರಾಜಸ್ಥಾನದಲ್ಲಿ ನಡೆದಿದೆ. ಪಕ್ಷಾಂತರಿಗೆ ಗಂಗಾಜಲ ಮತ್ತು ಗೋಮೂತ್ರ ಪ್ರೋಕ್ಷಣೆ ಮಾಡಿ ಶಾಸಕ ಬಾಲಮುಕುಂದ್ ಆಚಾರ್ಯ (Balmukund Acharya) ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್ (ಜೆಎಂಸಿಎಚ್) ಕಚೇರಿಯನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಬೇಕೆಂದು ಹವಾ ಮಹಲ್ ಶಾಸಕ ಆಚಾರ್ಯ ಅವರು, ಗಂಗಾಜಲ ಮತ್ತು ಗೋಮೂತ್ರ ಮಿಶ್ರಣವನ್ನು ಕೌನ್ಸಿಲರ್‌ಗಳು ಮತ್ತು ಆವರಣದ ಮೇಲೆ ಸಿಂಪಡಿಸಿದರು. ಇದನ್ನೂ ಓದಿ: ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಮುನೇಶ್ ಗುರ್ಜರ್ ಅವರ ಜಾಗಕ್ಕೆ ಕುಸುಮ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು. ಅವರಿಗೆ ಕಾಂಗ್ರೆಸ್ 7 ಮತ್ತು ಪಕ್ಷೇತರ ಒಬ್ಬ ಸದಸ್ಯರ ಬೆಂಬಲ ನೀಡಿದರು. ಇವರೆಲ್ಲ ಬಿಜೆಪಿ ಸೇರ್ಪಡೆಯಾದರು.
ಮಂಗಳವಾರ ಈ ಎಂಟು ಮಂದಿ ಬಿಜೆಪಿ ಸೇರಿದರು. ಯಾದವ್ ಬುಧವಾರ ಅಧಿಕಾರ ವಹಿಸಿಕೊಳ್ಳುವ ಮೊದಲು, ಶಾಸಕ ಆಚಾರ್ಯ ಅವರು ಜೆಎಂಸಿಎಚ್ ಆವರಣ, ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳಿಗೆ ‘ಶುದ್ಧೀಕರಣ’ ಸಮಾರಂಭ ನಡೆಸಿದರು. ಇದನ್ನೂ ಓದಿ: ಮೋದಿ ಬದಲು ನೀವೇ ಪ್ರಧಾನಿಯಾಗಿ- ಲೋಕಸಭೆ ಚುನಾವಣೆಗೆ ಮೊದಲು ಗಡ್ಕರಿಗೆ ಆಫರ್ ನೀಡಿದ್ದ ವಿಪಕ್ಷಗಳು
ನಾನು ಗಂಗಾಜಲ ಮತ್ತು ಗೋಮೂತ್ರದ ಮಿಶ್ರಣವನ್ನು ಹೊಂದಿರುವ ಬಾಟಲಿಯನ್ನು ಇಟ್ಟುಕೊಂಡಿದ್ದು, ನಿತ್ಯವೂ ಕುಡಿಯುತ್ತೇನೆ ಎಂದು ಆಚಾರ್ಯ ತಿಳಿಸಿದ್ದಾರೆ.