ಬೆಂಗಳೂರು: ಸಚಿವ ಸಂಪುಟ ರಚನೆ ಕಸರತ್ತಿನಲ್ಲಿ ಕೊನೆಗೂ ಕಾಂಗ್ರೆಸ್ ತಮ್ಮ ಸಚಿವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಸಕ ಬಿಸಿ ಪಾಟೀಲ್ ಅವರ ಹೆಸರನ್ನು ಕೈಬಿಡಲಾಗಿದೆ. ಇದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿ ಗೆದ್ದಿದ್ದೇನೆ. ನಾನು ಏಕೈಕ ಶಾಸಕನಾಗಿದ್ದರೂ, ನನಗೆ ಸಚಿವ ಸ್ಥಾನ ಕೊಡಲಿಲ್ಲ. ಇದರಿಂದ ನಮ್ಮ ಜಿಲ್ಲೆಯವರಿಗೆ ಬೇಸರವಾಗಿದೆ. ಇನ್ನು ಮುಂದೆ ಅವರು ಹೇಗೆ ಕಾಂಗ್ರೆಸ್ ಗೆ ಬೆಂಬಲಿಸುತ್ತಾರೆ. ಯಾವ ರೀತಿ ಪಟ್ಟಿ ಆಯ್ಕೆ ಮಾಡಿದ್ದಾರೆ ನನಗೆ ತಿಳಿದಿಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಬಿಜೆಪಿಯವರು ಸಚಿವ ಸ್ಥಾನ, ಆಸೆ ಆಮಿಷ ಒಡ್ಡಿದ್ರೂ, ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಶಃ ನಾನು ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ಹಣಕ್ಕಾಗಿ, ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿಯಲ್ಲ ನಾನು. ಅಂತಹ ಭಾವನೆ ನನಗೆ ಇಲ್ಲ, ಆದರೆ ನನಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇದರಿಂದ ನನಗೆ ನೋವಾಗಿದೆ. ನನ್ನ ಬೆಂಬಲಿಗರಿಗೂ ನೋವಾಗಿದೆ ಎಂದು ಬೇಸರದಿಂದ ಹೇಳಿದರು.
ಸಚಿವರ ಪಟ್ಟಿಯಿಂದ ವೈಯಕ್ತಿಯವಾಗಿ ನನಗೆ ನಷ್ಟವಾಗಿಲ್ಲ. ಕಾಂಗ್ರೆಸ್ ಪಕ್ಷ ದೊಡ್ಡ ನಷ್ಟ ಅನುಭವಿಸುತ್ತದೆ. ನಾನು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ. ಕಾಂಗ್ರೆಸ್ ನ ಆಡಳಿತ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.
ನನಗೆ ಯಾವುದೇ ಗಾಡ್ ಫಾದರ್ ಇಲ್ಲ. ಹಣ ಕೂಡ ಇಲ್ಲ ಅದಕ್ಕಾಗಿ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರಲ್ಲ. ಬಂದರೆ ನೋಡೋಣ. ಬರಲಿಲ್ಲ ಅಂದರೆ ಜನರು ಶಾಸಕರಾಗಿ ಗೆಲ್ಲಿಸಿದ್ದಾರೆ. ಅವರ ಕೆಲಸ ಮಾಡುತ್ತೇನೆ. ನಾನು ಬಹಳಷ್ಟು ಪ್ರಯಾಣಿಕವಾಗಿ ಇದ್ದೆ. ಈಗ ಅದೇ ತ್ಪಪ್ಪಾಯಿತು ಅಂತ ವಿಷಾದ ವ್ಯಕ್ತಪಡಿಸಿದ್ರು.