Dharwad

ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಬೆಲ್ಲದ್

Published

on

Share this

ಧಾರವಾಡ: ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ತನಿಖೆ ಬಗ್ಗೆ ನಾವು ಓಪನ್ ಡಿಸ್ಕಷನ್ ಮಾಡುವುದು ಇರುವುದಿಲ್ಲ, ಅಧಿಕಾರಿಗಳು ಆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ಸಣ್ಣ ವಿಷಯವನ್ನು ಬೆಳೆಸುವ ಅವಶ್ಯಕತೆ ಇಲ್ಲ, ಗೃಹ ಇಲಾಖೆ ಮುಖ್ಯಮಂತ್ರಿಗಳ ನಂತರದ ಅತ್ಯಂತ ಲೋಡ್ ಇರುವ ಇಲಾಖೆ. ಎಲ್ಲೋ ತಪ್ಪಾದರೂ ಅದನ್ನು ಗೃಹ ಮಂತ್ರಿಗೆ ಕಟ್ಟುವುದು ತಪ್ಪು ಎಂದರು. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್

ಹೊಸ ವಿಷಯ ತಿಳಿದುಕೊಂಡು ಕೆಲಸ ಮಾಡಲು ಸ್ವಲ್ಪ ಸಮಯ ಹಿಡಯುತ್ತದೆ. ಗೃಹ ಮಂತ್ರಿ ಬಹಳ ಸಮಾಧಾನದ ರಾಜಕಾರಣಿ, ಅರಗ ಜ್ಞಾನೇಂದ್ರ ಅವರಿಗೆ ಇಲಾಖೆ ಗ್ರಿಪ್ ಸಿಕ್ಕಿದೆ ಎಂದರು.

Click to comment

Leave a Reply

Your email address will not be published. Required fields are marked *

Advertisement
Advertisement