ಚೆನ್ನೈ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಂತರ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.
#WATCH Tamil Nadu CM MK Stalin casts vote in 16th Presidential election, in Chennai pic.twitter.com/fmFb9sdw49
— ANI (@ANI) July 18, 2022
Advertisement
ಚೆನ್ನೈನ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮುಖ್ಯಮಂತ್ರಿಗಳು ನೇರವಾಗಿ ಫೋರ್ಟ್ ಸೇಂಟ್ ಜಾರ್ಜ್ ಕ್ಯಾಂಪಸ್‍ಗೆ ಬಂದರು. ಬೆಳಗ್ಗೆ 10 ಗಂಟೆಗೆ ಬಂದ ಸ್ಟಾಲಿನ್ ಅವರು ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‍ನಲ್ಲಿ ಮತ ಚಲಾಯಿಸಿದರು. ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಪ್ರತಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುತ್ತಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಬೆಂಬಲಿಸುತ್ತಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ NDA ಅಭ್ಯರ್ಥಿ ಧನಕರ್ ನಾಮಪತ್ರ ಸಲ್ಲಿಕೆ- ಮೋದಿ, ಶಾ ಭಾಗಿ
Advertisement
Advertisement
69 ವರ್ಷದ ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. 2 ದಿನ ಸೆಲ್ಫ್ ಐಸೋಲೇಷನ್‍ನಲ್ಲಿದ್ದ ಸ್ಟಾಲಿನ್ ಜುಲೈ 14ರಂದು ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಸ್ಟಾಲಿನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿ, ಅನಗತ್ಯ ಚರ್ಚೆ ಬೇಡ: ಮೋದಿ