ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ 38 ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಹಾಗೂ ಅವರು ವಿರೋಧ ಪಕ್ಷದವರಾಗಿದ್ದರೂ ಬಿಜೆಪಿಯೊಂದಿಗೆ ಅತ್ಯಂತ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ ಎಂದು ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಗೆ ಬ್ರೇಕಿಂಗ್ ನ್ಯೂಸ್ ಬೇಕಾ? 38 ಶಾಸಕರು ಬಿಜೆಪಿಯೊಡನೆ ಉತ್ತಮ ಸಂಬಂಧ ಹೊಂದಿದ್ದು, ಅವರ ಪೈಕಿ 21 ಶಾಸಕರು ಬಿಜೆಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
Advertisement
Advertisement
ಕಳೆದ ವರ್ಷ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ನಟನಾದ ನನ್ನನ್ನು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಗೆಲುವು ಸಾಧಿಸುವ ಪ್ರಯತ್ನದಲ್ಲಿತ್ತು. ಆದರೆ ಬಿಜೆಪಿ ಮುಸ್ಲಿಂ ವಿರೋಧಿ ಎಂದು ವಾದಿಸಿದ ಇತರ ಪಕ್ಷದವರಿಂದಾಗಿ ಹಿನ್ನಡೆಯಾಯಿತು ಎಂದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ‍್ಯಾರು ಕಣಿವೆಯನ್ನು ತೊರೆದಿಲ್ಲ: ಕೇಂದ್ರ ಸಚಿವ
Advertisement
ಬಿಜೆಪಿ ನಿಜವಾಗಿಯೂ ಮುಸ್ಲಿಂ ವಿರೋಧಿಯೇ ಆಗಿದ್ದರೆ, ದೇಶದ 3 ಮುಸ್ಲಿಂ ತಾರೆಗಳ(ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್) ಸಿನಿಮಾಗಳು ಹಿಟ್ ಆಗಲು ಹೇಗೆ ಸಾಧ್ಯ? 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಆ 3 ತಾರೆಗಳನ್ನು ದ್ವೇಷಿಸಿದರೆ ಅಥವಾ ಹಿಂದೂಗಳು ಅವರನ್ನು ಪ್ರೀತಿಸದೇ ಹೋದರೆ ಅವರ ಚಿತ್ರಗಳು ದೊಡ್ಡದಾಗಿ ಕಲೆಕ್ಷನ್ ಮಾಡುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
Advertisement
ಒಬ್ಬ ವ್ಯಕ್ತಿ ತನ್ನ ತಪ್ಪಿನ ಯಾವುದೇ ಪುರಾವೆಗಳಿಲ್ಲದೇ ಹೋದರೆ ಆತ ಜಗತ್ತಿಗೆ ಹೆದರಲು ಯಾವುದೇ ಕಾರಣಗಳಿರುವುದಿಲ್ಲ. ಆದರೆ ಆತ ತಪ್ಪು ಮಾಡಿದ್ದರೆ, ಜಗತ್ತಿನ ಯಾವ ಶಕ್ತಿಯೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೇ ಪಾರ್ಥ ಚಟರ್ಜಿ. ಅವರ ಆಪ್ತೆಯ ಮನೆಯಿಂದ 21 ಕೋಟಿ ರೂ. ಇಡಿ ವಶಪಡಿಸಿಕೊಂಡ ಬಳಿಕ ಚಟರ್ಜಿ ಹಾಗೂ ಅವರ ಆಪ್ತೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು: ಆಪ್ತೆ ಅರ್ಪಿತಾ