ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣ ಆರೋಪದ ಮೇಲೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮೂಖರ್ಜಿ ಬಂಧಿತರಾಗಿದ್ದಾರೆ. ವಿಚಾರಣೆ ವೇಳೆ ಅರ್ಪಿತಾ ತಮ್ಮ ಮನೆಯನ್ನು ಚಟರ್ಜಿಯವರು ಮಿನಿ ಬ್ಯಾಂಕ್‌ನಂತೆ ಬಳಸಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಕಳೆದ ಶುಕ್ರವಾರ ಜಾರಿ ನಿರ್ದೇಶನಾಲಯ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬರೋಬ್ಬರಿ 21 ಕೋಟಿ ರೂ. ಹಣದ ರಾಶಿ ಪತ್ತೆಯಾಗಿತ್ತು. ಇದಾದ ಮರುದಿನವೇ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ
ಮೂಲಗಳ ಪ್ರಕಾರ ಅರ್ಪಿತಾ ಮುಖರ್ಜಿ ತಮ್ಮ ಮನೆಯಲ್ಲಿ ಪತ್ತೆಯಾದ ಅಷ್ಟೂ ಹಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಅವರು ಎಲ್ಲಾ ಹಣವನ್ನು ನನ್ನ ಮನೆಯ ಒಂದೇ ಕೋಣೆಯಲ್ಲಿಡುತ್ತಿದ್ದರು. ಪ್ರತೀ ವಾರ ಅಥವಾ 10 ದಿನಗಳಿಗೊಮ್ಮೆ ಅವರು ನನ್ನ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ತನ್ನ ಮನೆಯಲ್ಲಿ ಅವರು ಎಷ್ಟು ಹಣವನ್ನು ಇಟ್ಟಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿರಲಿಲ್ಲ ಎಂದಿದ್ದಾರೆ.
ಚಟರ್ಜಿಯವರು ನನ್ನ ಮನೆ ಹಾಗೂ ಇನ್ನೊಬ್ಬ ಮಹಿಳೆಯ ಮನೆಯನ್ನೂ ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆ ಮಹಿಳೆ ಕೂಡಾ ಚಟರ್ಜಿಯವರ ಆಪ್ತ ಸ್ನೇಹಿತೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್