ಕ್ಯಾಚ್ ವಿವಾದ; ಮತ್ತೆ ಮೋಸದಾಟ ಆಡಲು ಪ್ರಯತ್ನಿಸಿತಾ ಆಸೀಸ್? – ಅಭಿಮಾನಿಗಳು ಕೆಂಡ

Public TV
3 Min Read
ODI 2

ಲಂಡನ್: ಇತ್ತೀಚಿನ ಕ್ರಿಕೆಟ್ ಟೂರ್ನಿಗಳಲ್ಲಿ ಅಂಪೈರ್ ತೆಗೆದುಕೊಳ್ಳುವ ನಿರ್ಧಾರಗಳು ಕ್ರಿಕೆಟ್ ಲೋಕದಲ್ಲಿ ಭಾರೀ ವಿವಾದಗಳನ್ನ ಸೃಷ್ಟಿಸುತ್ತಿವೆ. ಆದ್ರೆ ಇಂಗ್ಲೆಂಡ್-ಆಸೀಸ್ ನಡುವಿನ ಆಶಸ್ (Ashes 2023) ಟೂರ್ನಿಯ 2ನೇ ಟೆಸ್ಟ್ ಪಂದ್ಯದಲ್ಲಿ ವಿವಾದಕ್ಕೀಡಾಗುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ ಬೆನ್ ಡಕೆಟ್ (Ben Duckett) ಅವರ ಕ್ಯಾಚ್ 3ನೇ ಅಂಪೈರ್‌ನ ಸಮಯ ಪ್ರಜ್ಞೆಯಿಂದ ತಪ್ಪಿದೆ.

ಹೌದು. ಆಶಸ್ ಟೂರ್ನಿಯಲ್ಲಿ 2ನೇ ಟೆಸ್ಟ್‌ನ 4ನೇ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೌಲಿಂಗ್‌ನಲ್ಲಿ ಬೆನ್ ಡಕೆಟ್ ಅವರು ಬಾರಿಸಿದ ಹೊಡೆತ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಆಗಿತ್ತು. ವೇಗಿ ಮಿಚೆಲ್ ಸ್ಟಾರ್ಕ್ ಕ್ಯಾಚ್ ಹಿಡಿಯುತ್ತಿದ್ದಂತೆ ಇಡೀ ತಂಡ ಕುಣಿದು ಕುಪ್ಪಳಿಸಿತ್ತು. ಇದರಿಂದ ಬಾಡಿದ ಮುಖಹೊತ್ತು ಪೆವಿಲಿಯನ್‌ನತ್ತ ಹೊರಟಿದ್ದರು. ಆಗ ಕ್ರೀಸ್‌ನಲ್ಲಿದ್ದ ನಾಯಕ ಬೆನ್‌ಸ್ಟೋಕ್ಸ್ (Ben Stokes) 3ನೇ ಅಂಪೈರ್ ಪರಿಶೀಲನೆಗೆ ತೆಗೆದುಕೊಂಡರು. ನಂತರ ಸ್ಟಾರ್ಕ್ ಕ್ಯಾಚ್ ಹಿಡಿದು ನಿಯಂತ್ರಿಸಲಾಗದೇ ಚೆಂಡನ್ನು ನೆಲಕ್ಕೆ ತಾಕಿಸಿದ್ದದ್ದು ಕಂಡುಬಂದಿತು. ಇದರಿಂದ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದರು.

ಈ ಬಗ್ಗೆ ಮೈದಾನದಲ್ಲಿ ಭಾರೀ ಚರ್ಚೆ ಸಹ ನಡೆಯಿತು. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಏಕೆ ಔಟ್ ಇಲ್ಲ ಎಂದು ವಾಗ್ವಾದಕ್ಕಿಳಿದರು. ಆದ್ರೆ ಕ್ಯಾಚ್ ಹಿಡಿದ ನಂತರ ಸ್ಟಾರ್ಕ್ ಚೆಂಡನ್ನು ನೆಲಕ್ಕೆ ತಾಕಿಸಿದ್ದಾರೆ. ಕ್ಯಾಚ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸದ ಕಾರಣ, ಬ್ಯಾಟರ್ ಪರವಾಗಿ ನಿರ್ಧಾರ ನೀಡಬೇಕಾಯಿತು ಎಂದು ಅಂಪೈರ್ ಸಮಾಧಾನಪಡಿಸಿದರು. ಹಾಗಾಗಿ ಆಸ್ಟ್ರೇಲಿಯಾ ತಂಡ ನಿರಾಶೆಗೊಂಡಿತು. ಇದನ್ನೂ ಓದಿ: 48 ವರ್ಷಗಳ ಇತಿಹಾಸದಲ್ಲೇ ಫಸ್ಟ್‌ ಟೈಂ ವಿಶ್ವಕಪ್‌ ಟೂರ್ನಿಯಿಂದಲೇ ವೆಸ್ಟ್‌ ಇಂಡೀಸ್‌ ಔಟ್‌

ODI

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಟೀಂ ಇಂಡಿಯಾ (Team India) ಆಟಗಾರ ಶುಭಮನ್ ಗಿಲ್ ಅವರ ಕ್ಯಾಚ್ ವಿಚಾರ ಭಾರೀ ವಿವಾದ ಹುಟ್ಟುಹಾಕಿತ್ತು. ದೇಶ-ವಿದೇಶ ಕ್ರಿಕೆಟ್ ದಿಗ್ಗಜರಿಂದಲೂ ಟೀಕೆಗಳು ಕೇಳಿಬಂದಿತ್ತು. ಅಲ್ಲದೇ ಸ್ಟೀವ್ ಸ್ಮಿತ್ ತೆಗೆದುಕೊಂಡಿದ್ದ ಜೋ ರೂಟ್ ಅವರ ಕ್ಯಾಚ್ ಸಹ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್‌ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್‌ ಉತ್ತರ ಕೊಟ್ಟ ಅಖ್ತರ್‌

Shubman Gill 1

ಆಶಸ್ ಟೂರ್ನಿಯ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್ ಪುಲ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್ ಸರಿಯಾಗಿ ಸಿಗದ ಬ್ಯಾಕ್‌ವಾರ್ಡ್ ಪಾಯಿಂಟ್ ಕಡೆ ಹಾರಿತು. ಈ ವೇಳೆ ಸ್ಟೀವ್ ಸ್ಮಿತ್ ಕ್ಯಾಚ್ ಪಡೆದರು. ಕ್ಯಾಚ್ ಪಡೆದ ತಕ್ಷಣ ಸ್ಮಿತ್ ಕುಣಿದು ಕುಪ್ಪಳಿಸಿದರು. ಈ ವೇಳೆ ಗೊಂದಲಕ್ಕೆ ಒಳಗಾದ ಫೀಲ್ಡ್ ಅಂಪೈರ್‌ಗಳು 3ನೇ ಅಂಪೈರ್ ಸಹಾಯಕ್ಕೆ ಮೊರೆ ಹೋದರು. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್

3ನೇ ಅಂಪೈರ್‌ಗಳು ಹಲವು ಬಾರಿ ವಿಡಿಯೋ ರೀಪ್ಲೇ ವೀಕ್ಷಿಸಿದ ಬಳಿಕ ಅಂತಿಮವಾಗಿ ಜೋ ರೂಟ್ ಔಟ್ ಎಂದು ತೀರ್ಪು ನೀಡಲಾಯಿತು. ಈ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಆಸೀಸ್ ತಂಡ ಹಾಗೂ 3ನೇ ಅಂಪೈರ್ ವಿರುದ್ಧ ಕಿಡಿ ಕಾರಿದರು. ಸ್ಟೀವ್ ಸ್ಮಿತ್ ಚೆಂಡನ್ನು ಪಡೆಯುವಾಗ ನೆಲಕ್ಕೆ ತಾಗಿಸಿದ್ದಾರೆಂದು ಫೋಟೋ ಸಹಿತ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಲ್ಲದೇ 2ನೇ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ಮಿಚೆಲ್ ಸ್ಟಾರ್ಕ್ ಹಿಡಿದ ಬೆನ್ ಡಕೆಟ್ ಅವರ ಕ್ಯಾಚರ್ ಡಿಆರ್‌ಎಸ್‌ಗೆ ಮನವಿ ಮಾಡಲಾಗಿತ್ತು. ಆದ್ರೆ, ಅಂಪೈರ್ ನಿಗಾ ವಹಿಸಿ ನಾಟೌಟ್ ತೀರ್ಪು ಪ್ರಕಟಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article