ಬೆಂಗಳೂರು: ಡಿಸೆಂಬರ್ 2021ರಲ್ಲಿ ‘ಮಿಷನ್ ಗಗನಯಾನ’ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಯಾರಿ ನಡೆಸುತ್ತಿದೆ. ಈ ಗಗನಯಾನದಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳಿಗಾಗಿ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ವಿಶೇಷ ಆಹಾರ ಹಾಗೂ ಲಿಕ್ವಿಡ್ ಪ್ಯಾಕೆಟ್‍ಗಳನ್ನು ತಯಾರಿಸಿದೆ.
ಹೌದು. ಈ ವಿಶೇಷ ಆಹಾರಗಳಲ್ಲಿ ಇಡ್ಲಿ, ಎಗ್ ರೋಲ್, ವೆಜ್ ರೋಲ್, ಹೆಸರು ಬೇಳೆ ಹಲ್ವಾ ಹಾಗೂ ವೆಜ್ ಪಲಾವ್ ಸೇರಿದಂತೆ ಇತರೆ ಆಹಾರಗಳನ್ನು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸೇವಿಸಲು ತಯಾರಿಸಲಾಗಿದೆ. ಸಚಿವಾಲಯವು ಗಗನಯಾತ್ರಿಗಳಿಗಾಗಿ ನೀರು ಹಾಗೂ ಜ್ಯೂಸ್‍ಗಳನ್ನು ಪ್ಯಾಕ್ ಮಾಡಲು ವಿಶೇಷ ಕಂಟೇನರ್ ಗಳ ವ್ಯವಸ್ಥೆಯನ್ನೂ ಮಾಡಿದೆ.
Advertisement
To help astronauts drink liquids including water and juices in Space where there is no gravity, special containers have also been developed for Mission Gaganyan. https://t.co/TWCaEMjYL7 pic.twitter.com/Ar6C1vXwRA
— ANI (@ANI) January 7, 2020
Advertisement
ಇಸ್ರೋ ಮಾಹಿತಿ ಪ್ರಕಾರ, 2021ರ ಡಿಸೆಂಬರ್ ನಲ್ಲಿ ಭಾರತವು ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಗುರಿಯನ್ನು ಹಾಕಿಕೊಂಡಿದೆ. ನೌಕೆಯಲ್ಲಿ ಮೂರು ಮಂದಿ ಗಗನಯಾತ್ರಿಕರು ಬಾಹ್ಯಾಕಾಶದಲ್ಲಿ ಕನಿಷ್ಠ 7 ದಿನಗಳ ಕಾಲವಾದರೂ ಇರಿಸಲು ಯೋಜನೆ ರೂಪಿಸಲಾಗುತ್ತಿದೆ.
Advertisement
ಈ ‘ಮಿಷನ್ ಗಗನಯಾನ’ ಯೋಜನೆಯನ್ನು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಘೋಷಿಸಿದ್ದರು. ಈ ಬಾಹ್ಯಾಕಾಶ ನೌಕೆಯ ಕ್ರಿವ್ ಮಾಡ್ಯೂಲ್ ವ್ಯವಸ್ಥೆಯನ್ನು ಹೊಂದಿರಲಿದೆ. ಗಗನಯಾನ ಯೋಜನೆಗೆ ಬರೋಬ್ಬರಿ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಲ್ಲದೆ ಗಗನಯಾನದಲ್ಲಿ ಭಾಗಿಯಾಗಲಿರುವ 4 ಮಂದಿ ಗಗನಯಾತ್ರಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಅವರನ್ನು ಜನವರಿಯಲ್ಲಿಯೇ ರಷ್ಯಾಕ್ಕೆ ತರಬೇತಿಗಾಗಿ ಕಳುಹಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್ ಅವರು ತಿಳಿಸಿದ್ದಾರೆ.