ಡೆಹ್ರಾಡೂನ್: ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ಯುವತಿ (Woman) ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲಿಯೇ(Resort) ಶವವಾಗಿ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಆದರೆ ಆರೋಪಿಗಳಲ್ಲೊಬ್ಬ ಬಿಜೆಪಿಯೊಂದಿಗೆ (BJP) ಸಂಪರ್ಕ ಹೊಂದಿರುವುದಾಗಿ ಕಾಂಗ್ರೆಸ್ (Congress) ಆರೋಪಿಸಿದ್ದು, ಇದೀಗ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ.
ಪೌರಿ ಗರ್ವಾಲ್ ನಿವಾಸಿ ಅಂಕಿತಾ ಭಂಡಾರಿ ಎಂದು ಗುರುತಿಸಲಾದ ಯುವತಿ ಲಕ್ಷ್ಮಣ್ ಜುಲಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ(Receptionist) ಕೆಲಸ ಮಾಡುತ್ತಿದ್ದಳು. ಸೆಪ್ಟೆಂಬರ್ 18 ರಂದು ಆಕೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ
Advertisement
Advertisement
ಯುವತಿಯ ಕುಟುಂಬದ ದೂರಿನ ಆಧಾರದ ಮೇಲೆ, 3 ದಿನಗಳ ಬಳಿಕ ಸೆಪ್ಟೆಂಬರ್ 21 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ನಾಪತ್ತೆಯಾದ ದಿನದಿಂದ ರೆಸಾರ್ಟ್ ಮಾಲೀಕ ಮತ್ತು ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಬಳಿಕ ತಿಳಿಸಿದ್ದಾರೆ.
Advertisement
Advertisement
ಇಂದು ಪೊಲೀಸರು ರೆಸಾರ್ಟ್ ಮಾಲೀಕ ವಿನೋದ್ ಆರ್ಯ, ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಮತ್ತು ವ್ಯವಸ್ಥಾಪಕ ಸೌರಭ್ ಭಾಸ್ಕರ್‌ನನ್ನು ಬಂಧಿಸಿದ್ದಾರೆ. ಇದಾದ ಬಳಿಕ ಉತ್ತರಾಖಂಡ ಕಾಂಗ್ರೆಸ್‌ನ ವಕ್ತಾರ ಗರಿಮಾ ಧಸೋನಿ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನೋದ್ ಆರ್ಯ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ