ತಿರುವನಂತಪುರಂ: ಕಳೆದೆರಡು ವರ್ಷಗಳ ಹಿಂದೆ ನಾಪತ್ತೆ(Missing) ಆಗಿದ್ದ ಬೆಕ್ಕೊಂದು ಇತ್ತೀಚೆಗೆ ಕೇರಳದ(Kerala) ಕೊಟರ‍್ಟಾಯಂನಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದೆ.
ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಪಟ್ಟಣದಲ್ಲಿರುವ ಉಷಮ್ಮ ಎನ್ನುವವರು 2016ರಲ್ಲಿ ಒಂದು ಬೆಕ್ಕನ್ನು(Cat) ದತ್ತು ಪಡೆದಿದ್ದರು. ಅದಕ್ಕೆ ಅವರು ಪ್ರೀತಿಯಿಂದ ರತೀಶ್ ಎಂದು ಹೆಸರಿಟ್ಟಿದ್ದರು. ಆದರೆ ನಾಲ್ಕು ವರ್ಷಗಳ ಹಿಂದೆ ರತೀಶ್ ಅಪಘಾತಕ್ಕೀಡಾಗಿ ಕಾಲು ಮುರಿದಿತ್ತು. ಇದರ ಬೆನ್ನಲ್ಲೇ ಬೆಕ್ಕಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರ ಚಿಕಿತ್ಸೆಯಾಗಿ 2 ವರ್ಷದೊಳಗೆ ರತೀಶ್ ಕಣ್ಮರೆಯಾಯಿತು.
Advertisement
Advertisement
ಇದಾದ ಬಳಿಕ ಮನೆಯವರು ಕಂಗಾಲಾಗಿ ಹುಡುಕಲು ಆರಂಭಿಸಿದ್ದಾರೆ. ರತೀಶ್ ಸುಮಾರು ಎರಡು ವರ್ಷಗಳ ಹಿಂದೆ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಪಟ್ಟಣದಲ್ಲಿರುವ ಮನೆಯಿಂದ ನಾಪತ್ತೆ ಆಗಿದ್ದರೂ ಉಷಮ್ಮ ಬೆಕ್ಕು ಬದುಕುಳಿದಿದೆ ಎಂದು ನಂಬಿದ್ದರು. ಅದೇ ಭರವಸೆಯಲ್ಲಿ ಸುತ್ತಮುತ್ತಲೂ ಹುಡುಕುವುದರ ಜೊತೆಗೆ ನೆರೆಹೊರೆಯವರನ್ನು ವಿಚಾರಿಸಿದರೂ ಸಿಕ್ಕಿರಲಿಲ್ಲ. ಆದರೆ ಎರಡು ವರ್ಷಗಳ ಬಳಿಕ ರತೀಶ್ ತಾನಾಗೆ ಮನೆಗೆ ವಾಪಸ್ ಬಂದಿದೆ. ಮನೆಗೆ ಬರುತ್ತಿದ್ದಂತೆ ತನ್ನ ಯಜಮಾನಿಯನ್ನು ಕಂಡು ಆಕೆಯ ಕಾಲು ಸುತ್ತಿದೆ. ಇದರಿಂದ ಉಷಮ್ಮ ಸಂತೋಷಗೊಂಡಿದ್ದು, 2 ವರ್ಷಗಳ ನಂತರ ಬಂದ ಬೆಕ್ಕನ್ನು ಸುತ್ತಮುತ್ತಲಿನ ಊರವರು ಬಂದು ನೋಡಿ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಕರ್ನಾಟಕಕ್ಕೆ ಹಣ ಇಟ್ಟಿರುವುದು ಅವರಿಗೆ ಇಷ್ಟವಿಲ್ಲವೇನೋ: ಖರ್ಗೆಗೆ ಸಿಎಂ ತಿರುಗೇಟು
Advertisement
Advertisement
ಈ ಬಗ್ಗೆ ಮಾತನಾಡಿರುವ ಉಷಮ್ಮ, ನನ್ನ ಬೆಕ್ಕು ಎರಡು ವರ್ಷಗಳ ಹಿಂದೆ ಕೋವಿಡ್(Covid) ಸಮಯದಲ್ಲಿ ಕಾಣೆಯಾಗಿತ್ತು. ಈಗ ಅದು ನಮ್ಮ ಮನೆಗೆ ಮರಳಿದೆ. 4 ವರ್ಷಗಳ ಹಿಂದೆ ಬೆಕ್ಕಿಗೆ ಅಪಘಾತವಾಗಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆಗಾಗಿ ನಾವು 6,000 ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಈಗ ಅದು ಹಿಂತಿರುಗಿದ್ದಕ್ಕೆ ನಾವು ಸಂತೋಷವಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಕೇರಳಕ್ಕೆ ಕರ್ನಾಟಕ ಸರ್ಕಾರ ಸ್ಪಷ್ಟನೆ