Connect with us

Bengaluru City

ಮುಖ್ಯಮಂತ್ರಿಗಳನ್ನ ಭೇಟಿಯಾದ ಅಡ್ಲಿನ್ ಕ್ಯಾಸ್ಟಲಿನೊ

Published

on

ಬೆಂಗಳೂರು: ಇಂದು ‘ಲೀವಾ ಮಿಸ್ ದೀವಾ ಯೂನಿವರ್ಸ್-2020’ ಸೌಂದರ್ಯ ಸ್ಪರ್ಧೆ ವಿಜೇತೆ, ಉಡುಪಿಯ ಕುಮಾರಿ ಅಡ್ಲಿನ್ ಕ್ಯಾಸ್ಟಲಿನೊ ಭೇಟಿ ಮಾಡಿದರು.

ಈ ವೇಳೆ ಮುಖ್ಯಮಂತ್ರಿಗಳು ಕನ್ನಡತಿ ಕುಮಾರಿ ಅಡ್ಲಿನ್ ಕ್ಯಾಸ್ಟಲಿನೊ ಅವರನ್ನು ಅಭಿನಂದಿಸಿ, ‘ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿಯೂ ಸಫಲರಾಗುವಂತೆ ಹಾರೈಸಿದರು. ಟ್ವಿಟ್ಟರ್ ಮುಖ್ಯಮಂತ್ರಿಗಳ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಆಡ್ಲಿನ್ ಕ್ಯಾಸ್ಟಲಿನೋ ಭಾರತದ ಸಾವಿರಾರು ಚೆಲುವೆಯರನ್ನು ಹಿಂದಿಕ್ಕಿ ವಜ್ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಕರಾವಳಿ ಜಿಲ್ಲೆ ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿಯಾಗಿರುವ ಆಡ್ಲಿನ್ ಭಾನುವಾರ ಹುಟ್ಟೂರಿಗೆ ಆಗಮಿಸಿದ್ದರು. ತಮ್ಮ ಸ್ವಂತ ಮನೆ ಮತ್ತು ದೊಡ್ಡಮ್ಮನ ಮನೆಗೆ ಬಂದು ಸಂತಸವನ್ನು ಹಂಚಿಕೊಂಡಿದ್ದಾರೆ. ನಮ್ಮೆಲ್ಲ ಸಾಧನೆಯ ಹಿಂದೆ ಭಗವಂತನ ಆಶೀರ್ವಾದ ನನ್ನೆಲ್ಲ ಆಪ್ತರ ಪ್ರೋತ್ಸಾಹ ಇದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *