ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

Advertisements

ಹಾವೇರಿ: ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡ (Arecanut Tree) ಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದು, ದುಷ್ಕರ್ಮಿಗಳ ಕೃತ್ಯದಿಂದ ಜಮೀನಿನಲ್ಲಿ ಬಿದ್ದು ಹೊರಳಾಡಿ ರೈತ ಕಣ್ಣೀರು ಹಾಕಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

Advertisements

ರಾತ್ರಿ ವೇಳೆಯಲ್ಲಿ ತೋಟಕ್ಕೆ ನುಗ್ಗಿ 52 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ತುಂಡಾಗಿ ಬಿದ್ದಿರೋ ಅಡಿಕೆ ಗಿಡಗಳನ್ನು ತಬ್ಬಿಕೊಂಡು, ಜಮೀನಿನಲ್ಲಿ ರೈತ (Farmer) ಉರುಳಾಡಿ ಕಣ್ಣೀರು ಹಾಕಿದ್ದಾನೆ. ಈ ಕೃತ್ಯವನ್ನ ಎಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ರೈತ ಅಡಿವೆಪ್ಪ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

Advertisements

ಅಡಿವೆಪ್ಪ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡಿಕೆ ಗಿಡಗಳನ್ನ ಬೆಳೆಸಿದ್ದ, ಇನ್ನೂ ಎರಡು ವರ್ಷಕ್ಕೆ ಫಸಲು ಪ್ರಾರಂಭವಾಗುತಿತ್ತು. ಅದರೆ ದುಷ್ಕರ್ಮಿಗಳ ಕೃತ್ಯದಿಂದ ಅನ್ನದಾತ ಕಂಗಾಲಾಗಿದ್ದಾನೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರೋ ದುಷ್ಕರ್ಮಿಗಳ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

Live Tv

Advertisements
Exit mobile version