ಬೆಂಗಳೂರು: ಹೊಸ ವರ್ಷದ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿರುವ ಬೆಂಗಳೂರು ಪೊಲೀಸರಿಗೆ ಹೊಸದೊಂದು ಸವಾಲು ಎದುರಾಗಿದೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಬಿಗ್ರೇಡ್ ರೋಡ್, ಚರ್ಚ್ ಸ್ಟ್ರಿಟ್ ಸುತ್ತಮುತ್ತ ವಿಚಿತ್ರ ಗ್ಯಾಂಗ್ ಹುಟ್ಟಿಕೊಂಡಿದೆ.
ಬೆಂಗಳೂರು ಪೊಲೀಸರು ಹೊಸ ವರ್ಷಕ್ಕೆ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವ ತಯಾರಿಯಲ್ಲಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಆದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಹದ್ದಿನ ಕಣ್ಣಿಡಲು ಪೊಲೀಸರು ಭರ್ಜರಿ ತಯಾರಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಏರಿಯಾದ ಸುತ್ತ ಹುಟ್ಟಿಕೊಂಡಿರುವ ವಿಚಿತ್ರ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆಗೇಡಿಸಿದೆ.
Advertisement
Advertisement
ಯುಬಿ ಸಿಟಿ, ಎಂಜಿ ರೋಡ್, ಪಬ್ ಬಾರ್‍ಗಳಲ್ಲಿ ಪುಂಡ ಕಂಠಪೂರ್ತಿ ಕುಡಿದು ಹಾವಳಿ ಇಡುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಕಿರಾತಕರ ಗ್ಯಾಂಗ್ ಲೇಟ್ ನೈಟ್ ಮಾಲ್‍ಗಳ ಬಾಗಿಲ ಮೇಲೆ, ಖಾಸಗಿ ಗೋಡೆಗಳ ಮೇಲೆ ಚಿತ್ರ ವಿಚಿತ್ರವಾಗಿ ಪೈಂಟ್ ಬಳಿಯುವುದು, ಪೊಲೀಸರ ವಿರುದ್ಧ ಕೆಟ್ಟ ಪದಗಳನ್ನು ಬರೆಯುತ್ತಿದ್ದಾರೆ.
Advertisement
ನಗರದ ಎಣ್ಣೆ ಪ್ರಿಯರ ಹಾಗೂ ಪಬ್ ಪ್ರಿಯರ ಹಾಟ್ ಸ್ಪಾಟ್ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಶಾಪಿಂಗ್ ಮಾಲ್‍ಗಳ ಬಾಗಿಲ ಮೇಲೆ ವಿಚಿತ್ರವಾಗಿ ಬರೆದು ವಿಕೃತಿ ಮೆರೆಯುತ್ತಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಣಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಚಿತ್ರ ವಿಚಿತ್ರ ಗ್ಯಾಂಗ್ ವಿರುದ್ಧ ಸಮೋಟೊ ಕೇಸ್ ದಾಖಲಿಕೊಂಡಿದ್ದಾರೆ.
Advertisement
ಪಬ್ಲಿಕ್ ಪ್ರಾಪರ್ಟಿ ಹಾಗೂ ಖಾಸಗಿ ಸ್ವತ್ತನ್ನ ವಿಕೃತಿಗೋಳಿಸುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಮತ್ತಷ್ಟು ವಿಕೃತ ಮನಸ್ಸುಗಳನ್ನು ಎಡೆಮುರಿ ಕಟ್ಟಲು ಮುಂದಾಗಿದ್ದಾರೆ.