ChikkaballapurDistrictsKarnatakaLatestMain Post

ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರ ಕೊಲೆ – ಚಿನ್ನಾಭರಣ ದೋಚಿ ಕಳ್ಳರು ಪರಾರಿ

ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯಲ್ಲಿ ನಡೆದಿದೆ.

ಅಂಚನಾ ತುಳಸಿಯಾನ (57 ) ಕೊಲೆಯಾದ ಮಹಿಳೆ. ಮಹಿಳೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಖದೀಮರು, ಕೊಲೆ ನಂತರ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಮನೆಯವರು ಅಂಗಡಿಗೆ ಹೋಗಿದ್ದನ್ನು ಕಂಡು ಪರಿಚಿತರೇ ದುಷ್ಕೃತ್ಯ ನಡೆಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಹೂಮಾಲೆಯಲ್ಲಿ ಹುಳು ಇರುತ್ತೆ ನನಗೆ ಹಾಕ್ಬೇಡಿ – ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

ಮನೆಯಲ್ಲಿದ್ದ ಸಿಸಿಟಿವಿಗಳನ್ನು ಕಿತ್ತಾಕಿ ಡಿವಿಆರ್‌ ಅನ್ನು ಕಿಡಿಗೇಡಿಗಳು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಮನೆಯಲ್ಲಿ ಯಾವುದೇ ವಸ್ತುಗಳನ್ನು ಮುಟ್ಟದ ಹಂತಕರು, ಕೇವಲ ಲಾಕರ್‌ಗಳನ್ನು ತೆರೆದು ಚಿನ್ನಾಭರಣ ನಗದು ಹಣ ಕದಿದ್ದಾರೆ. ಪರಿಚಯದವರೇ ಸಂಚು ರೂಪಿಸಿ ಫ್ರೀ ಪ್ಲಾನ್ ಆಗಿ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆಯಾದ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ದೇಗುಲದ ಅರ್ಚಕರ ತಲೆ ಕಡಿಯೋದಾಗಿ ಬೆದರಿಕೆ ಪತ್ರ – ಉದಯಪುರ ಮತ್ತೆ ಉದ್ವಿಗ್ನ

ಸ್ಥಳಕ್ಕೆ ಬೆರಳಚ್ಚು ತಂಡ, ಶ್ವಾನದಳದಿಂದ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಕೊಲೆಯಿಂದಾಗಿ ಇಡೀ ಬಡಾವಣೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.

Live Tv

Leave a Reply

Your email address will not be published.

Back to top button