DistrictsKarnatakaLatestLeading NewsMain PostVijayapura

ಹೂಮಾಲೆಯಲ್ಲಿ ಹುಳು ಇರುತ್ತೆ ನನಗೆ ಹಾಕ್ಬೇಡಿ – ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

Advertisements

ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾರ್ಯಕರ್ತರ ವಿರುದ್ಧವೇ ಗರಂ ಆದ ಪ್ರಸಂಗವೊಂದು ವಿಜಯಪುರದಲ್ಲಿ ನಡೆದಿದೆ.

ಹೌದು. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಜನರ ಕಷ್ಟಗಳಿಗೂ ಸ್ಪಂದಿಸುತ್ತಿದ್ದಾರೆ. ಆದರೆ ಇಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಾಜಿ ಸಚಿವರು ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದಾರೆ. ಇದನ್ನೂ ಓದಿ: ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ: ಸಿದ್ದರಾಮಯ್ಯ

Siddaramaiah

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ 50-60 ಸ್ಥಾನ ಗೆಲ್ಲುವ ನಿರೀಕ್ಷೆ ಹಾಗೂ ಆರ್‌ಎಸ್‌ಎಸ್ ಮೋಹನ್ ಭಾಗವತ್ ರಾಜ್ಯದ ಮಠಕ್ಕೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಲೂ ನಿರಾಕರಿಸಿದ್ದಾರೆ. ಇದೆ ವೇಳೆ ಕಾರ್ಯಕರ್ತರು ಹೂಮಾಲೆ ಹಾಕಲು ಮುಂದಾದಾಗ ನಿರಾಕರಿಸಿ, ಅದರಲ್ಲಿ ಹುಳು ಇರುತ್ತೆ ಅದಕ್ಕೆ ಬೇಡ ಎಂದ ಅವರು ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ: ಡಿ.ಕೆ ಶಿವಕುಮಾರ್

ನಮ್ಮ ಸರ್ಕಾರ ಬಂದಾಗ ಹೇಳಯ್ಯಾ:
ವಿಜಯಪುರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ರಸ್ತೆ ವಿಚಾರವಾಗಿ ಮನವಿ ಸಲ್ಲಿಸಲು ಗ್ರಾಮಸ್ಥರೊಂದಿಗೆ ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧವೂ ಅವರು ಗರಂ ಆದ್ರು. ಈ ಸರ್ಕಾರ ಏನು ಮಾಡಲ್ಲ? ನಮ್ಮ ಸರ್ಕಾರ ಬಂದಾಗ ಹೇಳಯ್ಯ ಎಂದು ಹೇಳಿದರು. ಇದೇ ವೇಳೆ `ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.

Live Tv

Leave a Reply

Your email address will not be published.

Back to top button