ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಆಟೋದಲ್ಲಿ ಬಂದು ಕೊಲೆ ಮಾಡಿದ ಘಟನೆ ನಗರದ ಕಾಮಾಕ್ಷಿಪಾಳ್ಯದ ಸುಂಕದಕಟ್ಟೆ ಬ್ರಿಡ್ಜ್ ಬಳಿ ನಡೆದಿದೆ.
ಕೋಟೇಶ್ವರ್ ರಾವ್ (30) ಕೊಲೆಯಾದ ವ್ಯಕ್ತಿ. ಹುಡುಗಿಯರ ದಂಧೆ ವಿಷಯವಾಗಿ ಸುರೇಶ್ ಹಾಗೂ ಕೋಟೇಶ್ವರ್ ಅಲಿಯಾಸ್ ಕೋಟೆ ನಡುವೆ ಜಗಳ ನಡಿತಿತ್ತು. ಹುಡುಗಿಯರನ್ನ ಒಂದು ಅಡ್ಡೆಯಿಂದ ಮತ್ತೊಂದು ಅಡ್ಡೆಗೆ ಕರೆದೊಯ್ದು ಹಣ ಕಾಸಿನ ವಿಚಾರಕ್ಕೆ ಗಲಾಟೆ ಆಗಿತ್ತು.
Advertisement
Advertisement
ಆ ವಿಚಾರವಾಗಿ ಇಂದು ಮಾತನಾಡಲು ಸುರೇಶ್ ಬಳಿಗೆ ಕೋಟೇಶ್ವರ್ ತನ್ನ ಸ್ನೇಹಿತರಾದ ಚಂದ್ರ, ಕೃಷ್ಣ ಹಾಗೂ ಆಂಟೋನಿ ಎಂಬುವರು ಹೋಗಿದ್ದರು. ಈ ವೇಳೆ ಏಕಾಏಕಿ ಅವರ ಮೇಲೆ ದಾಳಿ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಕೋಟೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Advertisement
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.