ಬೀದರ್: ಬಿಜೆಪಿ (BJP) ಶಾಸಕ ಶೈಲೇಂದ್ರ ಬೆಲ್ದಾಳೆ (Shailendra Beldale) ಅವರೊಂದಿಗೆ ಅನುಚಿತ ವರ್ತನೆ ತೋರಿ, ಏಕವಚನದಲ್ಲಿ ಮಾತಾನಾಡಿದ್ದ ಆರೋಪದ ಮೇಲೆ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರನ್ನ ಅಮಾನತುಗೊಳಿಸಲಾಗಿದೆ.
ಸಾರಿಗೆ ಇಲಾಖೆಯಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ (RTO Inspector) ಆಗಿದ್ದ ಮಂಜುನಾಥ ಕೊರವಿಯವರನ್ನು ಅಮಾನತು ಮಾಡಲಾಗಿದೆ. ಬೀದರ್ ಸಾರಿಗೆ ಮತ್ತು ರಸ್ತೆ ಸುರಕ್ಷಿತ ಆಯುಕ್ತರು ಅಮಾನತು ಮಾಡುವಂತೆ ಆದೇಶಿಸಿದ್ದಾರೆ.ಇದನ್ನೂ ಓದಿ: ಶಬರಿಮಲೆಯಲ್ಲಿ ನಟ ದಿಲೀಪ್‌ಗೆ VIP ದರ್ಶನ – ಪೊಲೀಸ್, TDB ನಡೆಗೆ ಹೈಕೋರ್ಟ್ ಕ್ಲಾಸ್
Advertisement
Advertisement
ಜಿಲ್ಲೆಯ ಹೊರವಲಯದ ನೌಬಾದ್ ಬಳಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆಗೆ ಆರ್‌ಟಿಓ ಇನ್ಸ್‌ಪೆಕ್ಟರ್ ಏಕವಚನದಲ್ಲಿ ಮಾತಾನಾಡಿದ್ದರು. ಈ ಹಿನ್ನೆಲೆ ಅವರನ್ನು ಬೀದರ್‌ನಿಂದ ರಾಯಚೂರಿಗೆ ವರ್ಗಾವಣೆ ಮಾಡಲಾಗಿತ್ತು. ಜೊತೆಗೆ ಏಕವಚನದಲ್ಲಿ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಬೆಲ್ದಾಳೆ ಅವರು ಸರ್ಕಾರಕ್ಕೆ ಹಕ್ಕುಚ್ಯುತಿ ಸಲ್ಲಿದರು. ಹಕ್ಕುಚ್ಯುತಿ ಸಲ್ಲಿಸಿದ್ದ ಹಿನ್ನೆಲೆ ಸಾರಿಗೆ ಆಯುಕ್ತರು ಪರಿಶೀಲನೆ ನಡೆಸಿ, ಆರ್‌ಟಿಓ ಇನ್ಸ್ಪೆಕ್ಟರ್‌ನನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.
Advertisement
ಇದಕ್ಕೂ ಮುನ್ನ ಉಸ್ತುವಾರಿ ಸಚಿವ ಖಂಡ್ರೆ, ಸಚಿವ ರಹೀಂಖಾನ್, ಶೈಲೇಂದ್ರ ಬೆಲ್ದಾಳೆ ಅವರು, ಆರ್‌ಟಿಓ ಇನ್ಸ್ಪೆಕ್ಟರ್ ಕೊರವಿ ಜಿಲ್ಲೆಯ ಮರಳು ಮಾಫಿಯಾ ಸೇರಿದಂತೆ ಹಲವು ಮಾಫಿಯಾಗಳಿಗೆ ಕೈಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.ಇದನ್ನೂ ಓದಿ: ಚಿತ್ರದುರ್ಗ | ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಮಾನಯಾನ ಭಾಗ್ಯ