ತುಮಕೂರು: ಮಹಿಳಾ ಪಿಎಸ್‌ಐ ಜೊತೆ ಅಸಭ್ಯವಾಗಿ ವರ್ತಿಸಿದ್ದ ತುಮಕೂರು ಯೂತ್ ಕಾಂಗ್ರೆಸ್ (Youth Congress) ಜಿಲ್ಲಾ ಅಧ್ಯಕ್ಷ ಶಶಿ ಹುಲಿಕುಂಟೆಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು (Tumkuru) ನಗರದ ತಿಲಕ್ ಪಾರ್ಕ್ ಮಹಿಳಾ ಪಿಎಸ್ಐ (PSI) ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಶಶಿ ಹುಲಿಕುಂಟೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಸೆಕ್ಸನ್ ಅಡಿ ಬಂಧಿಸಲಾಗಿದೆ.
ಪ್ರಕರಣವೊಂದರಲ್ಲಿ ವಶಕ್ಕೆ ಪಡೆದ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಶಶಿ ಹುಲಿಕುಂಟೆ ಪೊಲೀಸರಿಗೆ ಧಮಕಿ ಹಾಕಿದ್ದಾನೆ. ಬಿಡಲು ಸಾಧ್ಯ ಇಲ್ಲ ಎಂದಾಗ ಇನ್ನು 3 ತಿಂಗಳು ಕಾಯಿರಿ ನಮ್ಮ ಸರ್ಕಾರ ಬರುತ್ತದೆ. ಆಗ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ವಶಕ್ಕೆ ಪಡೆದ 4 ಜನರ ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲನ್ನು ಕದ್ದಿದ್ದಾರೆ ಎಂದು ಠಾಣೆ ಎದುರು ಪ್ರತಿಭಟನೆ ಮಾಡುತ್ತೇನೆ ಎಂದು ಆವಾಜ್ ಹಾಕಿದ್ದಾನೆ.
ಈ ವೇಳೆ ಶಶಿ ಹುಲಿಕುಂಟೆ ಮಾತಿಗೆ ಮಹಿಳಾ ಪಿಎಸ್‌ಐ ಪ್ರತಿರೋಧ ಒಡ್ಡಿದಾಗ, ಪಿಎಸ್ಐ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಠಾಣೆಯಲ್ಲಿದ್ದ 4 ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಯಾಮಾರಿಸಿ ಎಸ್ಕೇಪ್ ಮಾಡಿದ್ದಾನೆ. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ
ಈ ಹಿನ್ನೆಲೆಯಲ್ಲಿ ಪೊಲೀಸರು ಶಶಿ ಹುಲಿಕುಂಟೆಯನ್ನು ಐಪಿಸಿ ಸೆಕ್ಸನ್- 353, 507ರ ಅಡಿ ಬಂಧಿಸಿ 3ನೇ ಹೆಚ್ಚುವರಿ ಜೆಎಮ್‌ಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಜನನಿಬಿಡ ಪ್ರದೇಶದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ