ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಕೇರಳದ ಕಾಲೇಜಿಗೆ ಅತಿಥಿಯಾಗಿ ಹೋಗಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆಯೇ ಆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಟಿಯ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆ ಹುಡುಗನ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮಹಿಳೆಯರ ರಕ್ಷಣೆ ಕುರಿತಾಗಿಯೂ ಚರ್ಚೆ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ನಟಿಗೆ ಕ್ಷಮೆ ಕೇಳಿದೆ.
Advertisement
ಈ ಘಟನೆಯಿಂದಾಗಿ ನಮ್ಮ ಕಾಲೇಜಿಗೂ ಕೆಟ್ಟ ಹೆಸರು ಬಂದಿದೆ. ನಮಗೂ ತಲೆತಗ್ಗಿಸುವಂತಹ ವಿಚಾರವಿದು. ನಿಮ್ಮೊಂದಿಗೆ ಆ ಹುಡುಗ ಆ ರೀತಿ ನಡೆದುಕೊಂಡಿದ್ದು ತುಂಬಾ ನೋವಾಗಿದೆ. ಹಾಗಾಗಿ ಕ್ಷಮೆ ಕೇಳುತ್ತೇವೆ. ಕೇವಲ ಕ್ಷಮೆ ಮಾತ್ರವಲ್ಲ, ಆ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ರೀತಿ ಯಾರೂ ನಡೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
Advertisement
Advertisement
`ಸೂರರೈ ಪೊಟ್ರು’ (Soorarai Potru) ಸಿನಿಮಾದ ನಟಿ ಅಪರ್ಣಾ ಬಾಲಮುರಳಿ (Aparna Balamurali) ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ನಟಿ ಅಪರ್ಣಾ ಇತ್ತೀಚೆಗೆ ಕೇರಳದ ಕಾಲೇಜಿಗೆ ಭೇಟಿ ನೀಡಿದ್ದರು. ʻತಂಕಂʼ (Tankam) ಸಿನಿಮಾ ಪ್ರಚಾರ ಕಾರ್ಯಕ್ಕಾಗಿ ಕೇರಳದ (Kerala) ಕಾಲೇಜಿಗೆ ಅಪರ್ಣಾ ಮತ್ತು ತಂಡ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಅಪರ್ಣಾ ಕಡೆ ವಿದ್ಯಾರ್ಥಿಯೊಬ್ಬರು (Student) ಓಡಿ ಬಂದ. ಬಂದವನೇ ಅಪರ್ಣಾ ಕೈ ಹಿಡಿದು ಮಾತನಾಡಿದ, ಬಳಿಕ ಸೆಲ್ಫಿ ಕೇಳಿದ. ಅಪರ್ಣಾ ಕೂಡ ಸೆಲ್ಫಿ ಕೊಡಲು ಎದ್ದು ನಿಂತರು. ಆಗ ವಿದ್ಯಾರ್ಥಿ ಅಪರ್ಣಾ ಹೆಗಲ ಮೇಲೆ ಕೈ ಹಾಕಿದ. ಅಪರ್ಣಾ ಆತನಿಂದ ತಪ್ಪಿಸಿಕೊಂಡು ದೂರ ಹೋದರು.
Advertisement
ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಪರ್ಣಾ ತುಂಬಾ ಹಿಂಸೆ ಅನುಭವಿಸಿದ್ದಾರೆ. ಈ ಘಟನೆಯ ಬಳಿಕ ಕೆಲವು ವಿದ್ಯಾರ್ಥಿಗಳು ನಟಿಯ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಬಳಿಕ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ಕ್ಷಮೆ ಕೇಳಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಜೊತೆ ಹೀಗೆ ವರ್ತಿಸುವ ಯೋಚನೆ ನನ್ನಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದ ವೇಳೆ `ತಂಕಂ’ ಚಿತ್ರತಂಡ ಒಂದು ಮಾತನಾಡದೇ ಸೈಲೆಂಟ್ ಆಗಿದ್ದಕ್ಕೆ ತಂಡದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k