ಮಡಿಕೇರಿ: ಮೆಡಿಕಲ್ ಕಾಲೇಜು ಮಹಿಳಾ ಹಾಸ್ಟೆಲ್ ಬಳಿ ನಿತ್ಯ ರಾತ್ರಿ ಸಮಯದಲ್ಲಿ ಆಟೋದಲ್ಲಿ ಬಂದು ಹಾಸ್ಟೆಲ್ ವಿದ್ಯಾರ್ಥಿನಿಯರ ಮುಂದೆ ವಿಕೃತಿ ಮರೆಯುತ್ತಿದ್ದ ಕಾಮುಕನನ್ನು ಹೆಡೆಮುರಿ ಕಟ್ಟುವಲ್ಲಿ ಮಡಿಕೇರಿ (Madikeri) ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಜಿಲ್ (27) ಎಂಬ ಆಟೋ ಚಾಲಕ ಬಂಧಿತ ಅರೋಪಿಯಾಗಿದ್ದಾನೆ. ಸಿಜಿಲ್ ಎಂಬಾತ ಕಳೆದ ಒಂದು ವಾರದಿಂದ ರಾತ್ರಿ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಲೇಡಿಸ್ ಹಾಸ್ಟೆಲ್ ಬಳಿ ಹೋಗಿ ಹಸ್ತಮೈಥುನ ಮಾಡಿಕೊಳ್ಳುವುದು ಕಂಡುಬಂದಿದೆ. ಈತನ ವರ್ತನೆಗಳು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಸಿಸಿಟಿವಿಯ ಚಹರೆಗಳ ಆಧರಿಸಿ ಅರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೊಡಗು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಂದ ಕೆಕೆಆರ್‌ಟಿಸಿ ಆದಾಯ ಭಾರೀ ಏರಿಕೆ
Advertisement
Advertisement
ಆರೋಪಿ ಬೆಳಗ್ಗೆ ತೋಟದ ಕೆಲಸಕ್ಕೆ ಹೋಗಿ ರಾತ್ರಿ ಸಮಯದಲ್ಲಿ ಮಡಿಕೇರಿಯಲ್ಲಿ ಖಾಸಗಿ ಆಟೋವನ್ನು ಬಾಡಿಗೆಗೆ ತೆಗೆದುಕೊಂಡು, ಆಟೋ ಓಡಿಸುವ ನೆಪದಲ್ಲಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ರಾತ್ರಿಯೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಅಲ್ಲದೇ ಮೆಡಿಕಲ್ ಕಾಲೇಜಿನ ಕ್ಯಾಂಪಸ್ ಒಳಗೆ ಅಕ್ರಮವಾಗಿ ನುಸುಳಿಕೊಂಡು ಬರುತ್ತಿದ್ದ ಮೂವರು ಯುವಕರು ಕಾಲೇಜಿನ ಯುವಕರ ಮೇಲೆ ಹಲ್ಲೆ ಹಾಗೂ ಧಮ್ಕಿ ಹಾಕುತ್ತಿದ್ದರು.
Advertisement
ಮನು, ಪ್ರಸಾದ್, ಕಿರಣ್ ಮೂವರ ಮೇಲೆಯೂ ಪ್ರಕರಣ ದಾಖಲು ಮಾಡಿ, ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆಯಾಗಿದೆ. ಮತ್ತೋರ್ವನ ಪತ್ತೆಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಇಂತಹ ಯಾವುದೇ ಘಟನೆಗಳು ಶಾಲಾ-ಕಾಲೇಜುಗಳ ಬಳಿ ನಡೆಯುವ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ತಡ ಮಾಡಬೇಡಿ ಎಂದು ಶಾಲಾ ಕಾಲೇಜು ಆಡಳಿತ ಮಂಡಳಿಗೂ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜ್ ಕ್ಯಾಂಟೀನ್‌ನಲ್ಲಿ ಪ್ರಿನ್ಸಿಪಾಲ್ ನೇಣಿಗೆ ಶರಣು
Advertisement
ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು. ಮಾಹಿತಿ ನೀಡಿ ಅಥವಾ ದೂರು ಕೊಡಲು ಭಯ ಇದ್ದರೆ ನಮ್ಮ ಕಚೇರಿಯ ಎಸ್‌ಪಿ ಮಡಿಕೇರಿ ವಿಳಾಸಕ್ಕೆ ಅನಾಮಧೇಯ ಪತ್ರವನ್ನಾದರೂ ಬರೆದು ಕಳಿಸಿ. ಆಗಲೂ ನಾವು ಅರ್ಜಿ ಸ್ವೀಕರಿಸಿ ತನಿಖೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಎಸ್‌ಪಿ ಧೈರ್ಯ ಹೇಳಿದ್ದಾರೆ.
Web Stories