ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ತಾಲೀಮು ನಡೆಸುತ್ತಿದ್ದ ವೇಳೆ ಪತನಗೊಂಡಿದ್ದ ಸುಖೋಯ್-30 ಹಾಗೂ ಮಿರಾಜ್-2000 ಭಾರತೀಯ ಯುದ್ಧ ವಿಮಾನಗಳ (Fighter Jets) ಬ್ಲ್ಯಾಕ್ಬಾಕ್ಸ್ (ಡೇಟಾ ರೆಕಾರ್ಡರ್) (Black Box) ಭಾನುವಾರ ಪತ್ತೆಯಾಗಿದೆ.
मुरैना के पहाड़गढ़ में गिरा हेलीकॉप्टर अचानक लगी हेलीकॉप्टर में आग मोके पर मौजूद पुलिसबल भारतीय सेना का बताया जा रहा है यह लिख आफ्टर खबर मिल रही है कि एक पायलट की मौत हो गई है हालांकि इसकी आधिकारिक पुष्टि नहीं #crash #MadhyaPradesh #MadhyaPradeshNews #HelicopterCrash pic.twitter.com/M6ckhFQAL9
— DINESH SHARMA (@medineshsharma) January 28, 2023
Advertisement
ಸುಖೋಯ್-30 (Sukhoi 30) ಹಾಗೂ ಮಿರಾಜ್-2000 (Mirage 2000) ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ಟೇಕಾಫ್ ಆಗಿ ತಾಲೀಮು ನಡೆಸುತ್ತಿದ್ದವು. ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿದ್ದವು. ಪರಿಣಾಮ ಮಿರಾಜ್-2000 ಯುದ್ಧ ವಿಮಾನದಲ್ಲಿದ್ದ ಪೈಲಟ್ ಮೃತಪಟ್ಟಿದ್ದರು. ಇದನ್ನೂ ಓದಿ: ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?
Advertisement
Advertisement
ಘಟನೆ ಬಳಿಕ ಮಿರಾಜ್ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸುಖೋಯ್ ವಿಮಾನದ ಬ್ಲ್ಯಾಕ್ ಬಾಕ್ಸ್ನ ಒಂದು ಭಾಗ ಪತ್ತೆಯಾಗಿದ್ದು, ಉಳಿದ ಭಾಗವು ಭರತ್ ಪುರದಲ್ಲಿ ಬಿದ್ದಿರಬಹುದು ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಗ್ರಿ ಹೇಳಿದ್ದಾರೆ. ಇದನ್ನೂ ಓದಿ: Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ
Advertisement
ವಿಮಾನಗಳು ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಗಾಳಿಯಲ್ಲಿ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ. ಆದರೆ ಐಎಎಫ್ನಿಂದ (IAF) ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k