ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ವಿಡಿಯೋ ಮಾಡಿಕೊಳ್ಳಲು ಕಾಂಗ್ರೆಸ್‌ನವರು ಹೇಳಿದ್ರಾ ಎಂದು ಪ್ರಶ್ನಿಸುವ ಮೂಲಕ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಹರಿಹಾಯ್ದಿದ್ದಾರೆ.
ನನ್ನ ವಿರುದ್ಧ ಕಾಂಗ್ರೆಸ್ (Congress) ಪಿತೂರಿ ಮಾಡಿದೆ ಎಂಬ ಪ್ರಜ್ವಲ್ ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚನೆಯಾಗಿದೆ. ವಿದೇಶದಿಂದ ಬಂದು ಉತ್ತರ ಕೊಡಲಿ ಎಂದಿದ್ದಾರೆ. ಇದನ್ನೂ ಓದಿ: ಎಎಪಿ ಸಚಿವೆ ಅತಿಶಿಗೆ ಕೋರ್ಟ್ ಸಮನ್ಸ್
Advertisement
Advertisement
ಈ ಸಂದರ್ಭದಲ್ಲಿ ಪರಿಷತ್ ಅಭ್ಯರ್ಥಿ ಆಯ್ಕೆ ಬಗ್ಗೆ ಪರಮೇಶ್ವರ್ (Parameshwar) ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ಸಿಎಂ ಮುಖ್ಯಮಂತ್ರಿ, ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ಕೊಡುತ್ತಾರೆ. ನಮ್ಮ ವ್ಯಾಪ್ತಿಗೆ ಬರಲ್ಲ, ಅದೆಲ್ಲಾ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ: ವಿಪಕ್ಷಗಳಿಗೆ ಮೋದಿ ಟಾಂಗ್
Advertisement
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಒಂದು ಸ್ಥಾನ ನೀಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಸಮುದಾಯದ ಪಾತ್ರವೂ ಇದೆ. ನಮ್ಮಲ್ಲಿ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಯಾರನ್ನಾದರೂ ಒಬ್ಬರನ್ನ ಆಯ್ಕೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
Advertisement
ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಗೋಲಿಬಾರ್ ಆದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ವ? ಕೇಂದ್ರದಿಂದ ಬರಪರಿಹಾರ ಬರಲಿಲ್ಲ ಅಂದ್ರೂ ರಾಜ್ಯ ನಡೆಸಿದ್ದೇವೆ. ಗ್ಯಾರಂಟಿ ಮೂಲಕವೇ ರಾಜ್ಯವನ್ನ ನಡೆಸುತ್ತಿದ್ದೇವೆ. ಕೇಂದ್ರದ ಬಳಿ ಕೇಳಲು ಅವರಿಗೆ ಧೈರ್ಯ ಇಲ್ಲ. ಸಮೊದಲು ಮೋದಿ, ಕೇಂದ್ರದ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಬೇಕು ಎಂದು ಹೇಳಿದರು.