ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna), ಪ್ರಕರಣಗಳ ಸಂಬಂಧ ಜಾಮೀನಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಮಧ್ಯೆ ಸದ್ಯ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುವ ಆತಂಕದ ನಡುವೆ ಒಂದು ವಿಚಾರವಾಗಿ ಕೊಂಚ ರಿಲೀಫ್ ಸಿಕ್ಕಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಬೆನ್ನಲ್ಲೇ ಮಹಿಳಾ ಆಯೋಗ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (Commission for Protection of Child Rights) ಕೂಡ ಎಂಟ್ರಿ ಕೊಟ್ಟಿತ್ತು. ಒಂದು ಕಡೆ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರ ಪರವಾಗಿ ಮಹಿಳಾ ಆಯೋಗ ಫೀಲ್ಡಿಗೆ ಇಳಿದಿದ್ದರೆ, ಮತ್ತೊಂದು ಕಡೆ ಪ್ರಕರಣದಲ್ಲಿ ಅಪ್ರಾಪ್ತೆಯರು ಕೂಡ ಸಿಲುಕಿರಬಹುದು ಅನ್ನೋ ಅನುಮಾನ ಕೂಡ ಮಕ್ಕಳ ರಕ್ಷಣಾ ಆಯೋಗಕ್ಕೆ ಶುರುವಾಗಿತ್ತು. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್! – ಇಂದು ಸಂಜೆ ಮುಂಬೈನಲ್ಲಿ ರೋಡ್ ಶೋ
ಈ ಬೆನ್ನಲ್ಲೇ ಅಲರ್ಟ್ ಆದ ಆಯೋಗ, ಕೂಡಲೇ ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಈ ಬಗ್ಗೆ ವರದಿ ಕೇಳಿತ್ತು. ಜೊತೆಗೆ ಅಂತಹವರು ಯಾರಾದರೂ ಇದ್ದರೆ ನೇರವಾಗಿ ಆಯೋಗವನ್ನೇ ಸಂಪರ್ಕಿಸುವಂತೆ ಮನವಿ ಕೂಡ ಮಾಡಿತ್ತು. ಆದರೆ ಇಲ್ಲಿಯ ತನಕ ಎಸ್‌ಐಟಿಯಿಂದಲೂ (SIT) ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ತೊಂದರೆಗೆ ಒಳಗಾದವರು ಕೂಡ ಮುಂದೆ ಬಂದಿಲ್ಲ. ಹೀಗಾಗಿ ಸದ್ಯ ಪ್ರಕರಣದಲ್ಲಿ ಅಪ್ರಾಪ್ತೆಯರ ಬಳಕೆ ಆಗಿಲ್ಲ ಎಂಬ ನಿರ್ಧಾರಕ್ಕೆ ಆಯೋಗ ಬಂದಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್‌ಗೆ ದರ ನಿಗದಿ ಮಾಡಿ ಸರ್ಕಾರ ಆದೇಶ
ಇನ್ನೂ ಪ್ರಕರಣ ಸಂಬಂಧ ಈಗಲೂ ಕೂಡ ಆಯೋಗ ಮನವಿ ಮಾಡಿದೆ. ಒಂದೊಮ್ಮೆ ಅಂತಹವರು ಯಾರಾದರೂ ಇದ್ದರೆ ಈಗಲೂ ಮುಂದೆ ಬರುವಂತೆ ಮನವಿ ಮಾಡಿದ್ದು, ಸುರಕ್ಷತೆ ಒದಗಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಇಲ್ಲಿ ತನಕ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ಅಪ್ರಾಪ್ತೆಯರಾಗಲಿ, ಕುಟುಂಬವಾಗಲಿ ಮುಂದೆ ಬಾರದ ಕಾರಣ ಸದ್ಯ ಅಂತವರು ಯಾರೂ ಇಲ್ಲ ಎಂಬ ಲೆಕ್ಕಾಚಾರಕ್ಕೆ ಆಯೋಗ ಬಂದಿದ್ದು, ಪ್ರಜ್ವಲ್‌ಗೆ ಈ ಪ್ರಕರಣದಲ್ಲಿ ಕೊಂಚ ರಿಲೀಫ್ ನೀಡಲಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಾಸಿವೆ ಕಾಳಿನಷ್ಟೂ ನನ್ನ ಪಾತ್ರ ಇಲ್ಲ: ದದ್ದಲ್