ಹಾವೇರಿ: ಅಲ್ಪಸಂಖ್ಯಾತರು ಸಿದ್ದರಾಮಯ್ಯ ಋಣ ತೀರಿಸಬೇಕಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅಲ್ಪಸಂಖ್ಯಾತರಿಗೆ ಕರೆ ಕೊಟ್ಟರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನಮ್ಮದು ಹೈಕಮಾಂಡ್ ಪಕ್ಷ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ನಾಯಕರು. ಯಾರು ಮುಖ್ಯಮಂತ್ರಿ ಅನ್ನೋದನ್ನು ಅವರು ತೀರ್ಮಾನ ಮಾಡ್ತಾರೆ. ಅವರು ಹಾಕಿದ ಗೆರೆಯನ್ನು ನಾವು ದಾಟೋದಿಲ್ಲ. ಅಭಿಪ್ರಾಯ ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?
ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕು ಅಂತಾ ನಾನು ಓಡಾಡ್ತಿದ್ದೀನಿ. ಅಲ್ಪಸಂಖ್ಯಾತರು ಸಿದ್ದರಾಮಯ್ಯ ಅವರ ಋಣ ತೀರಿಸಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾಲದಲ್ಲಿ ಸಾಕಷ್ಟು ಹಣ ಕೊಟ್ಟಿದ್ದಾರೆ. ಹಿಂದಿನ ಯಾವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯರಷ್ಟು ಹಣ ಕೊಟ್ಟಿಲ್ಲ. ನಾವೆಲ್ಲ ಅವರ ಋಣ ತೀರಿಸಬೇಕೋ ಬೇಡ್ವೋ? ಎಂದು ಪ್ರಶ್ನೆ ಮಾಡಿದರು.
ನನ್ನ ಅಭಿಪ್ರಾಯ ಹೇಳಿ ಬಿಟ್ಟಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಹುಟ್ಟುಹಬ್ಬವನ್ನು ನಾವೆಲ್ಲ ಸೇರಿ ಇದೆ ರೀತಿ ಮಾಡ್ತೀವಿ. ಅಭಿಮಾನಿಗಳ ಒತ್ತಡದಿಂದ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಮಾಡ್ತಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಮಾಡುತ್ತಿರೋದು, ಅವರ ಅಭಿಮಾನಿಗಳು ಮಾಡ್ತಿರೋದು. ಅದರಲ್ಲಿ ಕಾಂಗ್ರೆಸ್ ಪಕ್ಷದವರು ಸೇರಿಕೊಂಡಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ, ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನ ಎಲ್ಲ ನಾಯಕರು ಬರ್ತಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್
ಹಾವೇರಿ ಕಾಂಗ್ರೆಸ್‍ನ ಭದ್ರಕೋಟೆ. ಎಲ್ಲಿ ಹೋದರೂ ಜನರು ಕುಣಿತ್ತಿದ್ದಾರೆ. ಸಿದ್ದರಾಮಯ್ಯ ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ನಾವು ದೆಹಲಿಗೆ ಹೋದಾಗ ಸಿದ್ದರಾಮಯ್ಯಗೆ ಸಾಕಷ್ಟು ಫೋನ್ ಬಂದವು. ಜನರ ಒತ್ತಡ ಜಾಸ್ತಿಯಾದಾಗ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ ಎಂದರು.