ಬೀದರ್: ಅಪ್ರಾಪ್ತ ಸಹೋದರಿಯರಿಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಅಟ್ಟರ್ಗಾ ಗ್ರಾಮದಲ್ಲಿ ನಡೆದಿದೆ.
ಅಂಕಿತಾ(15) ಹಾಗೂ ಶ್ರದ್ಧಾ(13) ಮೃತ ದುರ್ದೈವಿ ಸಹೋದರಿಯರಾಗಿದ್ದಾರೆ. ಅಪ್ರಾಪ್ತ ಸಹೋದರಿಯರು ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೊದಲಿಗೆ ಶಂಕೆ ವ್ಯಕ್ತವಾಗಿತ್ತು. ನಂತರ ಇವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ
ಮೃತ ಸಹೋದರಿಯರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಮಕ್ಕಳ ಶವ ಸಂಸ್ಕಾರ ಮಾಡುವುದಿಲ್ಲ, ಮೊದಲು ನಮಗೆ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಮೇಹಕರ್ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್
ಕುಟುಂಬಕ್ಕೆ ಶವ ಸಂಸ್ಕಾರ ಮಾಡುವಂತೆ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.