ಹಾಸನ: ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಿರುವ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಇದು ಜನರಿಗೆ ತಿಳಿದಿಲ್ಲ.
ಇದೀಗ ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಕಳೆದ ವರ್ಷ ಹಳೇಬೀಡು ವ್ಯಾಪ್ತಿಯಲ್ಲಿ ಈ ಪ್ರಕರಣ 2021ರಲ್ಲಿ ದಾಖಲಾಗಿತ್ತು. ಈ ಹಿನ್ನೆಲೆ 2022ರ ಮೇ 26 ರಂದು ನ್ಯಾಯಾಲಯದಲ್ಲಿ ಸಿವಿಲ್ ಜೆಎಂಎಫ್‍ಸಿ ನ್ಯಾಯಾಧೀಶ ರಾದ ಸಿ.ಪ್ರಸನ್ನ ಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಾಧೀಶರು, ಅಪ್ರಾಪ್ತ ಬಾಲಕ ನಿಯಮ ಉಲ್ಲಂಘಿಸಿದ ಹಿನ್ನೆಲೆ 20 ಸಾವಿರ ರೂ. ದಂಡ ವಿಧಿಸುವ ಮೂಲಕ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್
Advertisement
Advertisement
ಬೇಲೂರಿನಲ್ಲಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್ ಬಿದ್ದಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಬಾರಿ ದಂಡ ಬಿದ್ದ ಮೇಲೆ ತಂದೆ-ತಾಯಿಗಳು ಮಕ್ಕಳ ಕೈಗೆ ಸದ್ಯಕ್ಕೆ ವಾಹನಗಳನ್ನು ನೀಡುತ್ತಿಲ್ಲ.
Advertisement
Advertisement
ಈ ಕೇಸ್‍ಗೆ ಸಂಬಂಧಿಸಿದಂತೆ ಕಲಂ.184 ಅಡಿಯಲ್ಲಿ ಕೇಸ್ ದಾಖಲಿಸಿ ಚಾಲನೆ ಮಾಡುತ್ತಿದ್ದ ಬಾಲಕ ಅಜಾಗರೂಕತೆ, ಹೆಲ್ಮೆಟ್ ಇಲ್ಲದೆ ಚಾಲನೆ, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ್ದರಿಂದ ತಲಾ ಒಂದೊಂದು ಸಾವಿರದಂತೆ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲೀಕನಿಗೆ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯಲ್ಲಿ ವಿದ್ಯುಕ್ತ ಚಾಲನೆ