CrimeLatestMain PostNational

ರೂಮ್‍ನಲ್ಲಿ ಮಲಗಿದ್ದ ಅಪ್ರಾಪ್ತೆ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ

ಲಕ್ನೋ: ಅಪ್ರಾಪ್ತೆ ಮಲಗಿದ್ದ ರೂಮ್‍ಗೆ ನುಗ್ಗಿ ಆಕೆಯ ಮೇಲೆ ಅಪ್ರಾಪ್ತನೇ ಅತ್ಯಾಚಾರ ಎಸಗಿರುವ ಘಟನೆ ಮೇ 17 ರಂದು ಉತ್ತರ ಪ್ರದೇಶದ ಗುರುಗ್ರಾಮ್‍ನಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯು ಬಾಲಕಿ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಆಕೆಯ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅವನ ಸ್ನೇಹಿತ ಕೋಣೆಗೆ ಬೀಗ ಹಾಕಿ ಕಾವಲು ಕಾಯುತ್ತಿದ್ದ ಎಂದು ಸಂತ್ರಸ್ತೆಯ ಸಹೋದರಿ ಬಜ್‍ಘೇರಾ ಪೊಲೀಸ್ ಠಾಣೆಗೆ ಬಂದು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ವೇಳೆ ಮಗಳ ಕಿರುಚಾಟವನ್ನು ಕೇಳಿ ಹುಡುಗಿಯ ಪೊಷಕರು ಕೊಠಡಿಯ ಹತ್ತಿರ ಧಾವಿಸಿದ್ದು, ಈ ಸಂದರ್ಭದಲ್ಲಿ ಆರೋಪಿಗಳಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

STOP RAPE

ಘಟನೆಯ ಕುರಿತು ಇಬ್ಬರೂ ಅಪ್ರಾಪ್ತರನ್ನು ವಶಕ್ಕೆ ಪಡೆದು ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಫರಿದಾಬಾದ್‍ನಲ್ಲಿರುವ ರಿಮಾಂಡ್ ಹೋಂನಲ್ಲಿ (ವೀಕ್ಷಣಾಲಯ) ಇಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು

ಆರೋಪಿ ಈ ಹಿಂದೆ ಬಾಲಕಿಯ ಬಾತ್‍ರೂಮ್‍ಗೆ ನುಗ್ಗಿದ್ದನು. ನಂತರದಲ್ಲಿ ತಾನು ತಪ್ಪಾಗಿ ಪ್ರವೇಶಿಸಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಬಿದ್ದಿದ್ದನು ಎಂದು ದೂರುದಾರರು ಆರೋಪಿಸಿದ್ದಾರೆ.

ಇದರ ಮಧ್ಯೆ, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ.

Leave a Reply

Your email address will not be published.

Back to top button