ಚಿಕ್ಕಬಳ್ಳಾಪುರ: ವಿವಾಹಿತನೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡಿದ ಅಪ್ರಾಪ್ತ ಬಾಲಕಿಯೊಬ್ಬಳು ಕೊನೆಗೆ ಆತನೊಂದಿಗೆ ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಮಹದೇಶ್ವರ ಬಡಾವಣೆ ಬಳಿ ನಡೆದಿದೆ.
ಮೃತರು ವರವಣಿ ಗ್ರಾಮದ ಹರ್ಷಿಣಿ(17)(ಹೆಸರು ಬದಲಾಯಿಸಲಾಗಿದೆ) ಹಾಗೂ ಗೌರಿಬಿದನೂರು ನಗರದ ಹೂವಿನ ವ್ಯಾಪಾರಿ ರವಿಕುಮಾರ್(30) ಎಂದು ತಿಳಿದುಬಂದಿದೆ. ಅಂದಹಾಗೆ ಮೂಲತಃ ಮಂಡ್ಯ ಕಡೆಯವಳಾದ ಬಾಲಕಿ ವರವಣಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಗೌರಿಬಿದನೂರು ನಗರದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ರವಿಕುಮಾರ್ ಜೊತೆ ಪ್ರೇಮಾಂಕುರವಾಗಿದೆ.
ಕಳೆದ 20 ದಿನಗಳ ಹಿಂದೆ ರವಿಕುಮಾರ್ ಹಾಗೂ ಹರ್ಷಿಣಿ ತಮ್ಮ ಮನೆಗಳನ್ನು ಬಿಟ್ಟು ನಾಪತ್ತೆಯಾಗಿದ್ದರು. ಹೀಗಾಗಿ ಹರ್ಷಿಣಿ ಕಡೆಯವರು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಯುವತಿ ಅಪಹರಣ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಆದರೆ ಇಂದು ಇಬ್ಬರ ಮೃತದೇಹಗಳು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿದ್ದು, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಮದುವೆಯಾಗಿ ವಾಪಸ್ ಆದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv