ಕಲಬುರಗಿ: ಕೇಂದ್ರ ಗೃಹ ಸಚಿವರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನೇಮಕ ಮಾಡಲಾಗಿದ್ದು, ಇದಕ್ಕೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಇಲಾಖೆಯ ಹೆಸರನ್ನು ಕ್ಲೀನ್ ಚಿಟ್ ನೀಡೋ ಇಲಾಖೆ ಎಂದು ಮರುನಾಮಕರಣ ಮಾಡಿದರೆ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.
ನಾವು ಈಗ ಹೊಸ ಕೇಂದ್ರ ಗೃಹ ಸಚಿವರನ್ನು ಹೊಂದಿದ್ದೇವೆ. ನನಗನಿಸುತ್ತೆ ಕೇಂದ್ರ ಗೃಹ ಇಲಾಖೆ ಮರುನಾಮಕರಣ ಮಾಡಿದ್ರೆ ಒಳ್ಳೆಯದು. ‘ಕ್ಲೀನ್ ಚಿಟ್ ನೀಡೋ ಇಲಾಖೆ ಅಂತಾ ಮರುನಾಮಕರಣ ಮಾಡಿದ್ರೆ ಒಳ್ಳೆಯದು ಎಂದು ಹೇಳುವ ಮೂಲಕ ಶಾ ಅವರ ಕಾಲೆಳೆದಿದ್ದಾರೆ.
Now that we have a new Home Minister, I think it is better to rename the Ministry of Home Affairs as Ministry of Providing Clean Chits.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 1, 2019
ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಎನ್‍ಡಿಎ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ಸಚಿವರಾಗಿ ಹಾಗೂ 24 ಜನರು ರಾಜ್ಯ ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದರು. ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅಮಿತ್ ಶಾ ಅವರಿಗೆ ಗೃಹ ಇಲಾಖೆಯ ಜವಾಬ್ದಾರಿ ವಹಿಸುವ ಮೂಲಕ ಸಂಪುಟಕ್ಕೆ ಸೇರ್ಪಡೆ ಮಾಡಿದ್ದಾರೆ.
आज भारत के गृह मंत्री के रूप में पदभार संभाला।
मुझ पर विश्वास प्रकट करने के लिए प्रधानमंत्री @narendramodi जी का आभार व्यक्त करता हूँ।
देश की सुरक्षा और देशवासियों का कल्याण मोदी सरकार की सर्वोच्च प्राथमिकता है, मोदी जी के नेतृत्व मैं इसको पूर्ण करने का हर सम्भव प्रयास करूँगा। pic.twitter.com/4rKZW7sb6Z
— Amit Shah (@AmitShah) June 1, 2019