ಬೆಂಗಳೂರು: ಅನಿವಾರ್ಯತೆ ಬಂದರೆ ಸಚಿವರು ಸಹ ಸ್ಪರ್ಧೆ ಮಾಡಬೇಕಾಗುತ್ತದೆ ಅಂತ ಸುರ್ಜೇವಾಲ ತಿಳಿಸಿದ್ದಾರೆಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwara) ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ (Lok Sabha Elections) ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯ ಸಭೆಯಲ್ಲಿ ಆ ವಿಚಾರ ಚರ್ಚೆ ಆಗಿಲ್ಲ. ಆದರೆ ಸಚಿವರು ಸ್ಪರ್ಧೆ ಮಾಡೋ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಕಳೆದ ಬಾರಿ ಕೃಷ್ಟಭೈರೇಗೌಡ ಸ್ಪರ್ಧೆ ಉದಾಹರಣೆ ಕೊಟ್ಟು ಹೇಳಿದ್ದಾರೆ ಅನ್ನೋ ಮೂಲಕ ಸಚಿವರ ಸ್ಪರ್ಧೆಗೆ ಸಂದೇಶ ಬಂದಿದೆ ಅನ್ನೋ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ
Advertisement
Advertisement
28 ಸಚಿವರನ್ನ ದೆಹಲಿಗೆ ಬರೋದಕ್ಕೆ ಹೈಕಮಾಂಡ್ (Congress High Command) ನಾಯಕರು ಹೇಳಿದ್ದಾರೆ. ಜನವರಿ 11ಕ್ಕೆ ಎಲ್ಲರು ಹೋಗ್ತೀವಿ. ಒಬ್ಬಬ್ಬ ಸಚಿವರಿಗೆ ಒಂದೊಂದು ಲೋಕಸಭೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲನ್ನು ಕರೆದು ಸಲಹೆ ಸೂಚನೆ ಕೊಡ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರೋದಕೆ ಹೇಳಿದ್ದಾರೆ. ನಮ್ಮ ಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕೊಡ್ತೀವಿ. ಅಂತಿಮವಾಗಿ ಹೈಕಮಾಂಡ್ ಯಾರು ಅಭ್ಯರ್ಥಿ ಅಂತ ನಿರ್ಧಾರ ಮಾಡುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್
Advertisement
Advertisement
ಲೋಕಸಭೆಗೆ ಅಭ್ಯರ್ಥಿಗಳ ಪಟ್ಟಿ ಯಾವಾಗ ರಿಲೀಸ್ ಆಗುತ್ತೆ ಗೊತ್ತಿಲ್ಲ. ಹೈಕಮಾಂಡ್ ಅದನ್ನ ತೀರ್ಮಾನ ಮಾಡುತ್ತೆ. ಆದಷ್ಟು ಬೇಗ ಪಟ್ಟಿ ರಿಲೀಸ್ ಮಾಡಿ ಅಂತ ಮನವಿ ಮಾಡ್ತೀವಿ. ಅಭ್ಯರ್ಥಿಗಳ ಘೋಷಣೆಯಾದ್ರೆ, ಹೆಚ್ಚಿನ ಪ್ರಚಾರ ಮಾಡಬಹುದು. ಆದ್ದರಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿ ಅಂತ ಮನವಿ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ