ಬೆಂಗಳೂರು: ಬಿಬಿಎಂಪಿ ಆರ್ಥಿಕವಾಗಿ ಸಬಲವಾಗಬೇಕಾದರೆ ಎಲ್ಲರೂ ಆಸ್ತಿ ತೆರಿಗೆ ಕಟ್ಟಬೇಕು. ಆದರೆ ವಿಪರ್ಯಾಸವೆಂದರೆ ಗಣ್ಯಾತಿಗಣ್ಯರು ತೆರಿಗೆ ಕಟ್ಟದ ಸುದ್ದಿ ಈಗಾಗಲೇ ಸದ್ದು ಮಾಡಿದೆ. ಈಗ ಮತ್ತೊಮ್ಮೆ ಸಚಿವ ಸಂಪುಟದ ಮಂತ್ರಿಯೊಬ್ಬರು ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಕುಮಾರಸ್ವಾಮಿ ಸರ್ಕಾರದ ಆಹಾರ ಮತ್ತ ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಮಂತ್ರಿ ಜಮೀರ್ ಅಹಮದ್ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಕಂದಾಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ದಾಖಲೆಗಳ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಖಚಿತವಾಗಿದೆ.
Advertisement
Advertisement
ಎಷ್ಟು ಬಾಕಿ?
ಜಮೀರ್ ಅಹಮದ್ ಓಲ್ಡ್ ತುಮಕೂರು ರಸ್ತೆಯ ರಾಜ್ ಮಹಲ್ ವಿಲಾಸ್ ಆಸ್ತಿ ತೆರಿಗೆಯನ್ನ 2011-12 ಹಣಕಾಸು ವರ್ಷದಲ್ಲಿ ಪಾವತಿಸಿದ ಬಳಿಕ ಇಲ್ಲಿಯವರೆಗೂ ತೆರಿಗೆ ಕಟ್ಟಿಲ್ಲ ಎಂಬ ಮಾಹಿತಿ ಇದೆ. ಇಷ್ಟೇ ಅಲ್ಲದೇ ಜಕ್ಕಸಂದ್ರ ವಿಲೇಜ್ ಆಸ್ತಿಯ ಪಾಲುದಾರಿಕೆ ಹೊಂದಿರುವ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. 2016-17 ರ ಸಾಲಿನಿಂದ ತೆರಿಗೆ ಕಟ್ಡಿಲ್ಲ ಎಂಬ ಮಾಹಿತಿ ಪಾಲಿಕೆ ಬಳಿ ಇದೆ.
Advertisement
ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಇದೆ ಎಂದು ಪಾಲಿಕೆ ಲೆಕ್ಕ ತೋರಿಸುತ್ತಿದೆ. ಆದರೆ ನಿಜಕ್ಕೂ ಈ ವಿವಿಐಪಿಗಳು ಆಸ್ತಿ ತೆರಿಗೆ ಕಟ್ಟಲು ಮರೆತ್ರಾ? ಅಥವಾ ದೊಡ್ಡವರ ಬಾಕಿ ತೋರಿಸಿ ಪಾಲಿಕೆ ಕಾಲದೂಡುತ್ತಿದ್ದೇಯಾ ಎಂಬ ಪ್ರಶ್ನೆ ಮೂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv