– ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಬೇಕಿಲ್ಲ, ಬೇಕಿರೋದು ಅಧಿಕಾರ ಎಂದು ಕಿಡಿ
ಚಿಕ್ಕಬಳ್ಳಾಪುರ: ಬಿಜೆಪಿಯವರಿಗೆ ಹಿಂದೂಗಳು ಬೇಕಿಲ್ಲ ಮುಸ್ಲಿಮರೂ (Muslims) ಬೇಕಿಲ್ಲ ಬೇಕಿರೋದು ಅಧಿಕಾರ ಅಂತ ವಸತಿ ಸಚಿವ ಜಮೀರ್ ಅಹಮದ್ (Zameer Ahmed Khan) ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಸರ್ಕಾರದ 2 ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ವಸತಿ ಇಲಾಖೆ ಸಚಿವರು, ನಾವು ಕಾಂಗ್ರೆಸ್‌ನವರು (Congress) ಸಾಧನೆಗಳ ಮೂಲಕ ಮತಯಾಚನೆ ಮಾಡ್ತೀವಿ. ಬಿಜೆಪಿಯವರು (BJP) ಎಂದಾದರೂ ಸಾಧನೆಗಳ ಮೂಲಕ ಮತ ಕೇಳಿದ್ದಾರಾ? ಆದ್ರೆ ಬಿಜೆಪಿಯವರು ಹಿಂದೂ ಮುಸ್ಲಿಂ ಅಂತ ಬೇಧಭಾವ ಮಾಡಿ ಮತ ಕೇಳ್ತಾರೆ. ಅವರಿಗೆ ಹಿಂದೂಗಳು ಬೇಕಿಲ್ಲ ಮುಸ್ಲಿಮರೂ ಬೇಕಿಲ್ಲ ಬೇಕಿರೋದು ಅಧಿಕಾರ ಮಾತ್ರ ಅಂತ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶಾಂತಿ ದೃಷ್ಟಿಯಿಂದ ಯುದ್ಧ ಬೇಡ ಎಂದು ಸಿಎಂ ಹೇಳಿದ್ದಾರೆ: ಪರಮೇಶ್ವರ್ ಸಮರ್ಥನೆ
ಹಿಂದೂ, ಮುಸ್ಲಿಂ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇಸ್ಲಾಂ ನಲ್ಲಿ ಜಾತಿ ಧರ್ಮ ಭೇದ ಭಾವ ಮಾಡಿ ಅಂತ ಹೇಳಿಲ್ಲ. ʻಸಾರೇ ಜಹಾನ್ಸೇ ಅಚ್ಚಾ ಹಿಂದೂಸ್ತಾನ್ ಹಮಾರಾʼ ಅಂತ ಇಸ್ಲಾಂ ಧರ್ಮ ಹೇಳಿಕೊಟ್ಟಿರೋದು ಅಂತ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ದಳಪತಿ ವಿಜಯ್ ನೋಡಲು ಮರದಿಂದ ಜಿಗಿದು ಅಭಿಮಾನಿಯ ಹುಚ್ಚಾಟ- ವಿಡಿಯೋ ವೈರಲ್