ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿ ಅಧಿಕಾರದಲ್ಲಿದ್ದಾರೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೇ ತಾನೆ ಚರ್ಚೆ ಮಾಡಬೇಕಿರೋದು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ಸರ್ಕಾರ ಬೀಳುತ್ತೆ? ಮುಡಾ (MUDA) ವಿಚಾರದಲ್ಲಿ ಸಿಎಂ ಪಾತ್ರ ಏನಿದೆ? ತಪ್ಪೇನಿದೆ? ಬದಲಿ ಸೈಟ್ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಈಗಲೂ ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಇಲ್ಲ. ಏನಿದೆ ಕಪ್ಪು ಚುಕ್ಕೆ? ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ತಡೆದ್ರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ – ಸರ್ಕಾರಕ್ಕೆ ವಿಜಯೇಂದ್ರ ಖಡಕ್ ವಾರ್ನಿಂಗ್
ಬಿಜೆಪಿಯವರ ಬಳಿ ಯಾವುದೇ ವಿಚಾರ ಇಲ್ಲ. ಅದಕ್ಕೆ ಇದನ್ನೇ ದೊಡ್ಡ ಸುದ್ದಿ ಮಾಡ್ತಿದ್ದಾರೆ. ಕುಮಾರಸ್ವಾಮಿಯವರು ಅವರ ಬ್ಯಾಕಪ್‌ಗೆ ನಿಂತಿದ್ದಾರೆ. ಕುಮಾರಸ್ವಾಮಿಗೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನ ಸಹಿಸೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್
ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಕ್ಲಾರಿಫಿಕೇಶನ್ ನೀಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಏನಿದೆ? ಯಾವುದೋ ದೇವರಾಜ್ ಕಡೆಯಿಂದ ಬಾಮೈದ ಕೊಂಡುಕೊಂಡಿದ್ದಾರೆ. ಬಾಮೈದ ಅವರ ಅಕ್ಕನಿಗೆ ಗಿಫ್ಟ್ ಮಾಡಿದ್ದಾರೆ. ಅವರದೇ ಸೈಟಿನಲ್ಲಿ ಮುಡಾ ಲೇಔಟ್ ಮಾಡಿದೆ. ಸಿದ್ದರಾಮಯ್ಯನವರು ಸೈಟ್ ಹಂಚಿಕೆ ಮಾಡಿದ್ದಾರಾ? ಮುಖ್ಯಮಂತ್ರಿ ಇರುವಾಗ ಬದಲಿ ಸೈಟು ಕೊಟ್ಟಿದ್ರಾ? ಬಿಜೆಪಿ ಸರ್ಕಾರ ಇರುವಾಗ ಕೊಟ್ಟಿದ್ದು ಸೈಟು. ಸಿದ್ದರಾಮಯ್ಯ ಸಿಎಂ ಆಗಿರುವಷ್ಟು ದಿನ ಬಿಜೆಪಿಗೆ, ಕುಮಾರಸ್ವಾಮಿಗೆ ಸಿಎಂ ಆಗುವ ಅವಕಾಶ ಸಿಗಲ್ಲ ಅಂತಾ ಗೊತ್ತಾಗಿದೆ. ಜೀವನದಲ್ಲೇ ಮುಂದೆ ಬರೋಕೆ ಆಗಲ್ಲ ಅನ್ನೋ ಕಾರಣಕ್ಕೆ ಮಾತಾಡ್ತಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನೂ ಕಾಂಗ್ರೆಸ್‌ನವರೂ ಈ ಪ್ರಕರಣದಲ್ಲಿ ಕೈಜೋಡಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಈ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಯಾಕೆ ಕೈ ಜೋಡಿಸುತ್ತಾರೆ? ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದೇ ಫೈನಲ್. ನಾವು ಯಾರು, ಏನೂ ಮಾಡಕ್ಕಾಗಲ್ಲ. ಕೇಂದ್ರ ಸರ್ಕಾರದವರು ನಮಗೆ ಏನು ದುಡ್ಡು ಕೊಡಬೇಕೊ ಕೊಟ್ಟುಬಿಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ